..
kruti by shantibai dasaru ಶಾಂತಿಬಾಯಿ ದಾಸರು
ಸರಸ್ವತಿ ದೇವಿ
ವಾರಿಜನೇತ್ರೆಯ ಶಾರದೆ ಶ್ರೀಮುಖ
ತೋರುವದೆನ್ನಯ ಪಾರ ಪರಾತ್ಪರೆ ಪ
ಮಯೂರ ವಾಹಿನಿ ಕಾಯುವುದೆನ್ನ
ತಾಯೆ ಚಿದ್ಛನ ನಿಜದಾಯುವ ನೀಯುವ 1
ಬಾಲೆಯ ಭಾಗ್ಯವಿಶಾಲೆಯ ನವಕುಸುಮ
ಮಾಲೆಯ ಗಾನವಿಲೋಲೆ ವಾಗೇಶ್ವರಿ 2
ಛಂಧದೊಳೆನ್ನ ಸಾನಂದವ ಪಾಲಿಪ
ಮಂದಮತಿಯ ತಿದ್ದಿ ಸುಂದರ ಮುಖಿಯೆ ನೀ3
ನಂಬಿಕೆ ಹೊಂದಿಹನೆಂಬುವ ಭಕ್ತರ
ಇಂಬುಗಳನ್ನೆ ಕೊಟ್ಟು ಬೆಂಬಲಕಿರ್ಪಳೆ 4
ಕಂತು ಬ್ರಹ್ಮನರಾಣಿ ಅಂತರಿಕ್ಷಣೆವಾಣಿ
ಶಾಂತಿ ಸದ್ಗುರುಪದ ಸಂತಸಕಾರಿಣಿ 5
***