Showing posts with label ಆವ ದೈವವು ನೀನೇ ಕುಲುವ purandara vittala. Show all posts
Showing posts with label ಆವ ದೈವವು ನೀನೇ ಕುಲುವ purandara vittala. Show all posts

Tuesday, 3 December 2019

ಆವ ದೈವವು ನೀನೇ ಕುಲುವ purandara vittala

ರಚನೆ : ಪುರಂದರದಾಸರು
ರಾಗ : ಪಿಲು   ತಾಳ : ಆದಿ

ಆವ ದೈವವು ನೀನೇ  ಕುಲುವ  ದೈವವು  ನೀನೇ
ಕೈವಲ್ಯ ಪದದಾತ ಕೇಶವನು ನೀನೇ  ।
ಆವ ದೇವರಿಗೆ  ಈ ವೈಭವವು  ಕಾಣೆ
ರಾವಣಾಂತಕ  ಸ್ವಾಮಿ ಶ್ರೀ ಪುರಂದರ ವಿಠಲ ।।

ದೇವಕಿ ಕಂದ  ಮುಕುಂದ
ನಿಗಮೋದ್ಧಾರ  ನವನೀತ ಚೋರ ಖಗಪತಿ  ವಾಹನ  ಜಗದೋದ್ಧಾರ ।
ಶಂಖ ಚಕ್ರಧರ  ಶ್ರೀ ಗೋವಿಂದ ಪಂಕಜ  ಲೋಚನ ಪರಮಾನಂದ
ವರ ವೇಲಾಪುರ  ಚೆನ್ನ ಪ್ರಸನ್ನ ಪುರಂದರ ವಿಠಲ  ಸಕಲ ಗುಣ ಪೂರ್ಣ ।।
********