Showing posts with label ಏನು ಇರದ ಎರಡು ದಿನದ purandara vittala. Show all posts
Showing posts with label ಏನು ಇರದ ಎರಡು ದಿನದ purandara vittala. Show all posts

Wednesday, 4 December 2019

ಏನು ಇರದ ಎರಡು ದಿನದ purandara vittala

ಪುರಂದರದಾಸರು
ಏನು ಇರದ ಎರಡು ದಿನದ ಸಂಸಾರಜ್ಞಾನದಲಿ 
ದಾನಧರ್ಮವ ಮಾಡಿರಯ್ಯ ಪ.

ಹಸಿದು ಬಂದವರಿಗೆ ಅಶನವೀಯಲು ಬೇಕುಶಿಶುವಿಗೆ ಪಾಲ್ಬೆಣ್ಣೆಯುಣಿಸಬೇಕುಹಸನಾದ ಭೂಮಿಯನು ಧಾರೆಯರೆಯಲು ಬೇಕುಪುಸಿಯಾಡದಲೆ ಭಾಷೆ ನಡೆಸಲೇಬೇಕು 1

ಕಳ್ಳತನಗಳ ಮಾಡಿ ಒಡಲ ಹೊರೆಯಲು ಬೇಡಕುಳ್ಳಿರ್ದ ಸಭೆಯೊಳಗೆ ಕುಟಿಲ ನಡಿಸಲು ಬೇಡಒಳ್ಳೆಯವ ನಾನೆಂದು ಬಲು ಹೆಮ್ಮಲಿರಬೇಡಬಾಳ್ವೆ ಸ್ಥಿರವೆಂದು ನೀನಂಬಿ ಕೆಡಬೇಡ 2

ದೊರೆ ತನವು ಬಂದಾಗ ಕೆಟ್ಟ ನುಡಿಯಲು ಬೇಡಸಿರಿ ಬಂದ ಕಾಲಕ್ಕೆ ಮರೆಯಬೇಡಸಿರಿವಂತನಾದರೆ ಪುರಂದರವಿಠಲನಚರಣ ಕಮಲವ ಸೇರಿ ಸುಖಿಯಾಗು ಮನುಜ 3
**********