RAO COLLECTIONS SONGS refer remember refresh render DEVARANAMA
..
Kruti by ಸರಸಾಬಾಯಿ Sarasabai
ಬಾರಯ್ಯ ಎನ್ನ ಹೃದಯ ಮಂದಿರಕ್ಕೆ
ತೋರೈಯ್ಯ ಚರಣವ ಕ್ಷೀರಾಬ್ಧಿಶಯನಾ ಪ.
ಒಂದೂ ಅರಿಯದ ಮಂದಮತಿಯ
ಬಂದೂ ನೀ ಕಾಯೋ ಸಿಂಧುಶಯನನೇ 1
ವಾರಿಧಿ ತಂದೆ ಕ್ಷೀರಾಬ್ಧಿ ಶಯನಾ
ಪಾರು ಕಾಣಿಸಯ್ಯ | ಮಾರಾನಾಪಿತನೇ 2
ಶೇಷಾದ್ರಿ ವಾಸಾ ವಾಸುಕೀಶಯನಾ
ರಮಾವಲ್ಲಭ ವಿಠಲ ಪೊರೆಯನ್ನ3
***