Showing posts with label ಒಳಿತು ಈ ಶಕುನ ಫಲವಿಂದು ನಮಗೆ purandara vittala. Show all posts
Showing posts with label ಒಳಿತು ಈ ಶಕುನ ಫಲವಿಂದು ನಮಗೆ purandara vittala. Show all posts

Wednesday, 4 December 2019

ಒಳಿತು ಈ ಶಕುನ ಫಲವಿಂದು ನಮಗೆ purandara vittala

ಪುರಂದರದಾಸರು
ಒಳಿತು ಈ ಶಕುನ ಫಲವಿಂದು ನಮಗೆ ಜಲಜನಾಭನ ಸಂಗ ದೊರಕುವುದೆ ರಮಣಿ ಪ.

ವಾಮಗರುಡನನೋಡು ವಾಯಸದ ಬಲವನ್ನುಕೋಮಲಾಂಗಿಯರೈದು ಪೂರ್ಣಕುಂಭ ||ಸಾಮಾನ್ಯವೇಗೌಳಿ ಬಲಕಾಗಿ ನುಡಿಯುತಿದೆಪ್ರೇಮದಲಿ ಮಧುರ ವಚನವ ಕೇಳು ರಮಣಿ 1

ಮೊಳಗುತಿವೆಭೇರಿದುಂದುಭಿ ಘಂಟೆ ವಾದ್ಯಗಳುಫಲ ಪುಷ್ಪ ದಧಿಗಳಿದಿರಾಗುತಿದೆಕೊ ||ಚೆಲುವ ಭಾರದ್ವಾಜ ಪಕ್ಷಿ ಬಲವಾಗುತಿದೆಬಲುಹಂಗಎಡವಾಗುತಿದೆನೋಡುಕೆಳದಿ2

ನೋಡು ದ್ವಯ ಬ್ರಾಹ್ಮಣರು ಇದಿರಾಗಿ ಬರುವುದನುಕೂಡಿದುವು ಮನದ ಸಂಕಲ್ಪವೆಲ್ಲ ||ಬೇಡಿದ ವರಗಳೀವ ಪುರಂದರವಿಠಲನನೋಡಿ ಸಂತೋಷದಲಿ ನೆನೆವೆನೆಲೆ ರಮಣಿ 3
********