ಕಾಖಂಡಕಿ ಶ್ರೀ ಕೃಷ್ಣದಾಸರು
ಬಾರೆನ್ನ ಸಖಿಯೇ ಕರೆದು ತೋರಿಸೇ ಪ
ಕರೆದು ತೋರಿಸೇ ಕಂಜನಯ್ಯಾನಾ| ಕರಿವರ ದಾಯಕ ಕರುಣಾ ಸಾಗರನಾ 1
ಸರಸಿಜ ಲೋಚನ ಮುಕುಟ ಕುಂಡಲನಾ| ಕೌಸ್ತುಭ ಕೇಯೂರ ಧರನಾ 2
ಮದನ ಶರಕ ಗುರು ಮಾಡುವರೇನೇ| ಮಧುಹರ ಮುನಿವದು ಉಚಿತ ವೇನೇ 3
ಒಂದರಗಳಿಗೆಯ ಮರೆದಿರ ಲಾರೆ| ಇಂದು ನೀ ಧನ್ಯಳ ಮಾಡಲೆ ನೀರೆ4
ಬೆರೆದು ಬಿಡುವನಲ್ಲಾ ಸಕಲಂತರ್ಯಾಮಿ| ನೆರೆದನು ಗುರು ಮಹಿಪತಿ ಸುತಸ್ವಾಮಿ5
***