Audio by Vidwan Sumukh Moudgalya
ತಿರುಪತಿ ಶ್ರೀ ಪಂಡುರಂಗಿ ಹುಚ್ಚಾಚಾರ್ಯ ವಿರಚಿತ
( ಇಂದಿರೇಶಾಂಕಿತ ) ಶ್ರೀ ರಾಮದೇವರ ಸ್ತುತಿ ಪದ
ರಾಗ : ವಸಂತ ಆದಿತಾಳ
ರಾಮ ನಿಮ್ಮ ಪ್ರೇಮವನ್ನು
ಕಾಮಿಸುವೇ ಕರುಣಿ॥ಪ॥
ನಾಮಮಾತ್ರದಿ ಭಕ್ತೈಕಾಮಿತ ಪ್ರದನೆ
ಶಾಮಸುಂದರ ಪೂರ್ಣ ಸೋಮ ಸನ್ಮುಖನೆ
ಹೇಮಭರಣ ಭೂಷಿತ ಕೋಮಲಾಂಗನೆ ಅಯೋಧ್ಯಾ
ಧಾಮದೊಳಿಹ ಸೀತಾ ಕಾಮಿನಿ ಸಖನೆ॥೧॥
ಅಂಘ್ರಿ ಮೊದಲು ಸಕಲಾಂಗ ಸೌಭಗನೆ
ಮಂಗಲ ಮಹಿಮ ಕುರಂಗ ನಾಶಕನೆ
ತುಂಗವಿಕ್ರಮ ಸುರ ಸಂಘ ಸೇವಿತ ಕೃಪಾ-
ಪಾಂಗದಿಂದಲಿ ನೋಡ ಸಂಗ ಪುರುಷನೆ॥೨॥
ಕೋಶಲಾಧಿಪ ರಕ್ಷೋಧೀಶ ಪೋಷಕನೆ
ದೂಷಿ ರಾವಣನ ಸು ಸೇವ ಮಾಡಿದನೆ
ದಾಶರಥಿಯೆ ಮುನಿವೇಷ ವಿಜಯೀ ಇಂದಿ -
ರೇಶ ಎದುರೆ ಬಂದು ಪೋಷಿಸೆನ್ನನು ಬೇಗ॥೩॥
***