Showing posts with label ಸತ್ಯವೆಂಬುದೆ ಸ್ನಾನ ಉಪವಾಸ ಜಪ ನೇಮ purandara vittala. Show all posts
Showing posts with label ಸತ್ಯವೆಂಬುದೆ ಸ್ನಾನ ಉಪವಾಸ ಜಪ ನೇಮ purandara vittala. Show all posts

Saturday, 7 December 2019

ಸತ್ಯವೆಂಬುದೆ ಸ್ನಾನ ಉಪವಾಸ ಜಪ ನೇಮ purandara vittala

ರಾಗ ಕಲ್ಯಾಣಿ ಆದಿತಾಳ

ಸತ್ಯವೆಂಬುದೆ ಸ್ನಾನ ಉಪವಾಸ ಜಪ ನೇಮ ಅ-
ಸತ್ಯದಲಿ ಮಾಡುವ ಕರ್ಮ ವ್ಯರ್ಥ || ಪ||

ಅಪ್ಪಳಿಸಿ ಪರರ ಒಡವೆಗಳ ತಂದುಂಡು ತಾ-
ನೊಪ್ಪದಿಂದುಪವಾಸ ವ್ರತವ ಮಾಡಿ
ತಪ್ಪದಲೆ ಸ್ವರ್ಗವನು ಸೂರೆಗೊಂಬುವನೆಂಬೆ
ಸರ್ಪಗಳು ಮಾಡಿದ ಅಪರಾಧವೇನಯ್ಯ ||

ಬಿಡದೆ ಮದಮತ್ಸರಾಹಂಕಾರದಲಿ ಮುಳುಗಿ
ಒಡನೆ ಬೆರಳುಗಳೆಣಿಸಿ ಮೌನದಿಂದ
ತಡೆಯದಲೆ ಪರಲೋಕ ಸೂರೆಗೊಂಬುವೆನೆಂಬೆ
ಬಡ ಬಕನು ಮಾಡಿದ ಅಪರಾಧವೇನಯ್ಯ ||

ಪರಸತಿಯು ಪರಧನವು ಪರನಿಂದೆ ಪರಹಿಂಸೆ
ಪರಮಪಾತಕದ ಕಾರಣವೆಂದು ತಿಳಿದು
ಧರೆಗಧಿಕ ಪುರಂದರವಿಟ್ಠಲನ ಚರಣವನು
ನೆರೆ ಭಜಿಸಿ ಸುಖಿಯಾಗಿ ಬಾಳೆಲವೊ ಮನುಜ ||
***

pallavi

satyavembude snAna upavAsa japa nEma asatyadali mADuva karma vyartta

caraNam 1

appaLisi parara oDavegaLa tanduNDu tAnoppa tindupavAsa vratava mADi
tappadale svargavanu sUrekombuvanembe sarpagaLu mADida aparAdhavEnayya

caraNam 2

biDade mada matsarAhankAradali muLugi oDane beraLugaLeNisi maunadinda
taDeyadale paralOka sUrekombuvenembe baDa baganu mADida aparAdhavEnayya

caraNam 3

para satiyu para dhanavu para ninde para himse parama pAtakada kAraNavendu tiLidu
dharegadhika purandara viTTalana caraNavanu nere bhajisi sukhiyAgi bALelavo manuja
***