Showing posts with label ಏನು ಮರುಳಾದೆವ್ವ ಎಲೆ ಭಾರತೀ pranesha vittala. Show all posts
Showing posts with label ಏನು ಮರುಳಾದೆವ್ವ ಎಲೆ ಭಾರತೀ pranesha vittala. Show all posts

Sunday, 10 November 2019

ಏನು ಮರುಳಾದೆವ್ವ ಎಲೆ ಭಾರತೀ ankita pranesha vittala

by ಪ್ರಾಣೇಶದಾಸರು
ಏನು ಮರುಳಾದೆವ್ವ ಎಲೆ ಭಾರತೀ |ನೀನರಿಯೆ ಪವನನಿಂಥವನೆಂಬುದು ಪ

ಕಲ್ಲು ಹೊರುವನು ಮತ್ತೆ ಯಾರಿಂದಲಾಗದವು |ಎಲ್ಲರಂತಲ್ಲ ಕಪಿರೂಪನೋಡು||ಖುಲ್ಲಫಲಪುಷ್ಪಯುಕ್ತ ವನವನು ಕೆಡಿಸಿದನು |ಎಲ್ಲಿಂದ ಒದಗಿದನೊ ಈ ಪತಿಯೊ ನಿನಗೆ1

ರಕುತವಂ ಪಾನ ಮಾಡಿದನಂತೆ ಕೇಳಿದೆಯಾ |ರಕ್ಕಸೊಬ್ಬಳು ನಿನಗೆ ಸವತಿ ಇಹಳೂ ||ಮಕ್ಕಮಾರಿಮಗನುಂಟು ಗಂಡನು ಬದ |ನಕ್ಕೆ ಗತಿಯಿಲ್ಲದೆಲೆಭಿಕ್ಷೆಬೇಡುವನು 2

ಹುಟ್ಟು ಬಡವವ ತಾನಾದರೇನಾಗಲಿ ನಿನ್ನ |ಬಿಟ್ಟು ತುರ್ಯಾಶ್ರಮವ ಧರಿಸಿಕೊಂಡು ||ದೃಷ್ಟಿಗೋಚರನಾಗದೇ ನರರಿಗೆ ಪ್ರಾಣೇಶವಿಠಲನ ಬಳಿಯಲ್ಲಿ ಬದರಿಯೊಳು ಸೇರಿಹನು 3
*******