Showing posts with label ಸ್ಮರಿಸು ಮನವೆ ಸ್ಮರಿಸು ಸ್ಮರನ prasannavenkata. Show all posts
Showing posts with label ಸ್ಮರಿಸು ಮನವೆ ಸ್ಮರಿಸು ಸ್ಮರನ prasannavenkata. Show all posts

Monday, 18 November 2019

ಸ್ಮರಿಸು ಮನವೆ ಸ್ಮರಿಸು ಸ್ಮರನ ankita prasannavenkata

by ಪ್ರಸನ್ನವೆಂಕಟದಾಸರು
ಸ್ಮರಿಸು ಮನವೆ ಸ್ಮರಿಸು ಸ್ಮರನ ಪಿತನದುರಿತಭವಭಯಸಮೂಹದೂರಮಾವರನ ಪ.

ಒಬ್ಬ ಬಾಲನಯ್ಯನ ಒದೆದಒಬ್ಬ ಬಾಲಗಟವಿಲೊಲಿದಒಬ್ಬ ಬಾಲನ ಅಪ್ಪಿ ರಾಜ್ಯವ ಒಬ್ಬ ಬಾಲಗಿತ್ತುಒಬ್ಬ ಬಾಲೆಯುಂಗುಟದಿ ಪೆತ್ತಒಬ್ಬ ಬಾಲೆಯುಂಗುಟದಿ ಪೊತ್ತಒಬ್ಬ ಬಾಲೆಗಕ್ಷಯ್ಯೆಂದು ಕುಕ್ಷಿಲೊಬ್ಬ ಬಾಲಪನ 1

ಇಬ್ಬರ ಮೂರುಸಾರೆಲಳಿದಇಬ್ಬರಿಹ ಭೂಜವ ಮುರಿದಇಬ್ಬರೊಗ್ಗೂಡಿ ಬೆಳೆದು ಹನ್ನಿಬ್ಬರ ಬಡಿದಇಬ್ಬರ ಕಾರಾಗಾರ ತಗಿದಇಬ್ಬರುಪ್ಪು ಬೇಡಲಿ ಸದೆದಇಬ್ಬರಿಂದೈದಿ ಹೋಳಮಯ್ಯನ ನಿಬ್ಬರಿಸಿದನ 2

ಮೂರು ಮನೆಯೊಳಗಿಹನಮೂರುಮಾತಿಗೆ ಹೊಂದದವನಮೂರು ಮೈಯನ ಕೃತ ಸೇವೆಗೆ ಮೂರು ರೂಪಾದನಮೂರು ಪೊಳಲ ಹಗೆಕಾರನಮೂರುವೆಂಬನುರುಹಿದನಮೂರಾಂತಕ ಪ್ರಸನ್ವೆಂಕಟ ಮೂರು ಲೋಕೇಶನ 3
*******