ವಿಜಯದಾಸ
ಮಂಗಳಂ ಮಹಾಗಂಗೆ | ಭಕುತ ಮನೋಹಾರಿಗೆ |
ಮಂಗಳಂ ಬಲುದುರಿತ ಸಂಹಾರಿಗೆ |
ಮಂಗಳಂ ಪ್ರಯೋಗ ಕ್ಷೇತ್ರ ವಿಹಾರಿಗೆ
ಕುಸುಮ ಚಿತ್ರಹಾರಿಗೆ ಪ
ವೇಣಿಗೆ ನಿತ್ಯಕಲ್ಯಾಣಿಗೆ ಪಲ್ಲವ |
ಪಾಣಿಗೆ ಗಂಭೀರ ಗುಣಶ್ರೇಣಿಗೆ |
ತ್ರಾಣಿಗೆ ಕೋಕಿಲವಾಣಿಗೆ ಯಾದವನ |
ರಾಣಿಗೆ ಮಣಿಹೇಮ ಭೂಷಣೆಗೆ 1
ಖ್ಯಾತಿಗೆ ತ್ರಿಲೋಕ ಮಾತೆಗೆ ಯ |
ಮುನೆ ಸಂಘಾತಿಗೆ ಸರ್ವದಾ ಬಲುನೀತಿಗೆ |
ಜಾತಿಗೆ ತುಹಿನಗಿರಿದಾತೆಗೆ ಲಕುಮಿಯ |
ಅಮಿತ ಗುಣ ಪ್ರತಾಪಿಗೆ || 2
ಚನ್ನಿಗೆ ನಾರಿಕುಲರನ್ನಿಗೆ ಭಾಗ್ಯ ಸಂ |
ಪನ್ನಿಗೆ ಸಗರಕುಲ ಪಾವನ್ನಿಗೆ |
ಕಣ್ಣಿಗೆ ಪೊಳೆವ ಪ್ರಸನ್ನಿಗೆ ಸೀತಾ ಸು |
ವರ್ನಿಗೆ ವಿಜಯವಿಠ್ಠಲ ಕನ್ನಿಗೆ 3
*********
ಮಂಗಳಂ ಮಹಾಗಂಗೆ | ಭಕುತ ಮನೋಹಾರಿಗೆ |
ಮಂಗಳಂ ಬಲುದುರಿತ ಸಂಹಾರಿಗೆ |
ಮಂಗಳಂ ಪ್ರಯೋಗ ಕ್ಷೇತ್ರ ವಿಹಾರಿಗೆ
ಕುಸುಮ ಚಿತ್ರಹಾರಿಗೆ ಪ
ವೇಣಿಗೆ ನಿತ್ಯಕಲ್ಯಾಣಿಗೆ ಪಲ್ಲವ |
ಪಾಣಿಗೆ ಗಂಭೀರ ಗುಣಶ್ರೇಣಿಗೆ |
ತ್ರಾಣಿಗೆ ಕೋಕಿಲವಾಣಿಗೆ ಯಾದವನ |
ರಾಣಿಗೆ ಮಣಿಹೇಮ ಭೂಷಣೆಗೆ 1
ಖ್ಯಾತಿಗೆ ತ್ರಿಲೋಕ ಮಾತೆಗೆ ಯ |
ಮುನೆ ಸಂಘಾತಿಗೆ ಸರ್ವದಾ ಬಲುನೀತಿಗೆ |
ಜಾತಿಗೆ ತುಹಿನಗಿರಿದಾತೆಗೆ ಲಕುಮಿಯ |
ಅಮಿತ ಗುಣ ಪ್ರತಾಪಿಗೆ || 2
ಚನ್ನಿಗೆ ನಾರಿಕುಲರನ್ನಿಗೆ ಭಾಗ್ಯ ಸಂ |
ಪನ್ನಿಗೆ ಸಗರಕುಲ ಪಾವನ್ನಿಗೆ |
ಕಣ್ಣಿಗೆ ಪೊಳೆವ ಪ್ರಸನ್ನಿಗೆ ಸೀತಾ ಸು |
ವರ್ನಿಗೆ ವಿಜಯವಿಠ್ಠಲ ಕನ್ನಿಗೆ 3
*********