Showing posts with label ಬರುವ ಸಂದಣಿ ಭಾಳೆ ಭಾಳವೆ ಅಲ್ಲಿ ರಂಭೆ ಊರ್ವಶಿಯರ ಸಮ್ಮೇಳವೆ ramesha. Show all posts
Showing posts with label ಬರುವ ಸಂದಣಿ ಭಾಳೆ ಭಾಳವೆ ಅಲ್ಲಿ ರಂಭೆ ಊರ್ವಶಿಯರ ಸಮ್ಮೇಳವೆ ramesha. Show all posts

Wednesday, 4 August 2021

ಬರುವ ಸಂದಣಿ ಭಾಳೆ ಭಾಳವೆ ಅಲ್ಲಿ ರಂಭೆ ಊರ್ವಶಿಯರ ಸಮ್ಮೇಳವೆ ankita ramesha

.. 

ಬರುವ ಸಂದಣಿ ಭಾಳೆ ಭಾಳವೆ ಅಲ್ಲಿ ರಂಭೆ ಊರ್ವಶಿಯರ ಸಮ್ಮೇಳವೆ ಪ.


ವರಗಿರಿ ವಾಸನ ಕರೆಯ ಬರುವ ಸೊಬಗು ಧರೆಯ ಮ್ಯಾಲಿಲ್ಲ ಸುಂದರಿಯೆ ರುಕ್ಮಿಣಿಯೆ 1

ಪಾಂಚಾಲಿ ಮೊದಲಾದ ಕೆಂಚೆಯರ ಆಭರಣವುಮಿಂಚಿನಂತೆ ಹೊಳೆಯುತ ಸಿದ್ಧರಾಗಿಹರಮ್ಮ ಚಂಚಲೆಯರು2

ಕಾಲಿಂದಿ ಮೊದಲಾದವರು ಭಾಳ ವಸ್ತಗಳಿಟ್ಟುವೈಯಾರಿಯರು ಒಲಿಯುತ ವ್ಯಾಳಾಶಯನನ ಬಳಿಗೆ 3

ಭದ್ರೆ ಮೊದಲಾದವರು ತಿದ್ದಿ ತಳಪಿಟ್ಟು ಶುದ್ಧ ವಸ್ತಗಳಿಟ್ಟುಸಿದ್ಧರಾಗಿಹರಮ್ಮ ಅನಿರುದ್ದನ ಕರೆಯಲು4

ಮಂದಗಮನೆಯರು ಗಂಧಕಸ್ತೂರಿ ಪುಷ್ಪಅಂದಾಗಿ ಧರಿಸಿ ಆನಂದವಾಗಿಹರಮ್ಮ5

ಕಾಲಂದುಗೆಗೆಜ್ಜಿ ತೋಳಲೆ ತಾಯಿತ ಭಾರಿ ವಸ್ತಗಳಿಟ್ಟು ಲೋಲ್ಯಾಡುತಿಹರಮ್ಮ6

ಅಚ್ಚಮುತ್ತಿನ ವಸ್ತ ಸ್ವಚ್ಚತೋರುವಂತೆ ಬಿಚ್ಚಿ ಚಾದರ ಹೊತ್ತು ಮಚ್ಚನೇತ್ರಿಯರೆಲ್ಲ 7

ಅಂದುಗೆ ಅರಳೆಲೆ ಬಿಂದುಲಿ ಭಾಪುರಿ ಕಂದರಿಗೊಸ್ತಗಳಿಟ್ಟು ಆನಂದವಾಗಿಹರಮ್ಮ8

ಮುತ್ತಿನ ಝಲ್ಲೆ ವಸ್ತಗಳಿಟ್ಟು ಫುಲ್ಲನಾಭನ ಕರೆಯಲು ಎಲ್ಲರೂನಿಂತಾರೆ9

ಶ್ರೇಷ್ಠ ರಾಮೇಶನ ಅಷ್ಷೊಂದು ಕರೆಯಲು ಪಟ್ಟಾವಳಿಗಳನುಟ್ಟು ಧಿಟ್ಟೆಯರು ನಿಂತಾರೆ10

****