Showing posts with label ಯಾಕೊ ಪಾರ್ಥನ ಹೆಸರು ಹೋಕೆ ಮಾತಿನ ಕೃಷ್ಣ ಸಾಕು ನೀ ramesha. Show all posts
Showing posts with label ಯಾಕೊ ಪಾರ್ಥನ ಹೆಸರು ಹೋಕೆ ಮಾತಿನ ಕೃಷ್ಣ ಸಾಕು ನೀ ramesha. Show all posts

Wednesday, 4 August 2021

ಯಾಕೊ ಪಾರ್ಥನ ಹೆಸರು ಹೋಕೆ ಮಾತಿನ ಕೃಷ್ಣ ಸಾಕು ನೀ ankita ramesha

 ..

ಯಾಕೊ ಪಾರ್ಥನ ಹೆಸರು ಹೋಕೆ ಮಾತಿನ ಕೃಷ್ಣ ಸಾಕು ನೀ ನಮ್ಮ ಸರಿಯೇನೊ ಕೋಲಸಾಕು ನೀನಮ್ಮ ಸರಿಯೇನೊ ಬಲಿಯ ಮನೆಯ ಬಾಗಿಲ ಕಾಯ್ದು ಬದುಕಿದಿ ಕೋಲ ಪ.


ಚಿಕ್ಕಂದಿನಾರಭ್ಯ ವತ್ಸಗಳನೆ ಕಾಯ್ದು ತುಚ್ಛನಾಗಿದ್ಯೊ ಜನರೊಳು ತುಚ್ಛನಾಗಿದ್ಯೊ ಜನರೊಳು ರುಕ್ಮಿಣಿಯಕೂಡಿ ಹೆಚ್ಚಿನವನೆಂದು ಹೆಸರಾದ್ಯೊ ಕೋಲ1

ಜನಿಸಿದಾಕ್ಷಣದಲ್ಲಿ ಜನನಿ ಜನಕರನಗಲಿದಿದನಗಳ ಕಾಯ್ದ್ಯೊ ವನವನ ದನಗಳ ಕಾಯ್ದ್ಯೊ ವನವನ ತಿರುಗಿದ್ದುಮನಕೆ ತಾರಯ್ಯ ಮರೆಯದೆ ಕೋಲ 2

ಒಡಲಿಗಿಲ್ಲದೆ ಹೋಗಿ ತುಡುಗುತನವ ಮಾಡಿಗಡಗಿ ಸಂದಿಯಲಿ ಅಡಗಿದ್ಯೋಗಡಗಿ ಸಂದಿಯಲಿ ಅಡಗಿದ್ಯೋ ಕೃಷ್ಣ ನಿನಗೆ ಬಡಿವಾರ ಬಂದ ಬಗಿ ಹೇಳೊ ಕೋಲ3

ಸತ್ಯಭಾಮೆ ನಿನ್ನ ಹೊಸ್ತಿಲ ಹೊಗಲಿಕ್ಕೆಅತ್ಯಂತ ಪದವಿ ಒದಗಿತುಅತ್ಯಂತ ಪದವಿ ಒದಗಿತು ಕೃಷ್ಣ ನಿನ್ನ ಹೆತ್ತವರ ಭಾಗ್ಯ ಅರಿವೆಯೆ ಕೋಲ4

ಹೆಂಡಿರ ಪುಣ್ಯದಿಂದ ಕಂಡೆಯಾ ಈ ಭಾಗ್ಯವ ಪಾಂಡಿತ್ಯವೆಲ್ಲೊ ಬಲವೆಲ್ಲೊಪಾಂಡಿತ್ಯವೆಲ್ಲೊ ಬಲವೆಲ್ಲೊ ಕೃಷ್ಣ ನಿನ್ನ ಪಂಡಿತರು ಕೇಳೋ ಹುಸಿಯಲ್ಲ ಕೋಲ5

ನಾರಿಯರ ಪುಣ್ಯದಿ ಏರಿದ್ಯೋ ರಥವಾಜಿ ಧೀರತನದಿಂದ ಗಳಿಸಿದ್ಯೊಧೀರತನದಿಂದ ಗಳಿಸಿದ ಗಳಿಕೆಯ ತೋರೊ ರಾಮೇಶ ನಮಗಿನ್ನು ಕೋಲ 6

****