Showing posts with label ಡಂಕವ ಸಾರಿದನೋ ಯಮ ತನ್ನ ನಗರದಿ ಘಂಟೆಯ ನುಡಿಸಿದನು ramadasa. Show all posts
Showing posts with label ಡಂಕವ ಸಾರಿದನೋ ಯಮ ತನ್ನ ನಗರದಿ ಘಂಟೆಯ ನುಡಿಸಿದನು ramadasa. Show all posts

Sunday, 5 September 2021

ಡಂಕವ ಸಾರಿದನೋ ಯಮ ತನ್ನ ನಗರದಿ ಘಂಟೆಯ ನುಡಿಸಿದನು ankita ramadasa

 ರಾಮದಾಸರು

ಡಂಕವ ಸಾರಿದನೋ ಯಮ ತನ್ನ ನಗರದಿ ಘಂಟೆಯ ನುಡಿಸಿದನು ಪ 


ಡಂಕಸಾರಿದ ತನ್ನ ತುಂಟದೂತರಿಗ್ವೊ ಯ್ಕುಂಠನ ದಾಸರ ತಂಟೆಯು ಬೇಡೆಂದು ಅ.ಪ ಕಾಲಕಾಲದಿ ಹರಿಯಕಥೆ ಕೀರ್ತ ನಾಲಿಸುವರ ನೆರೆಯು ತಾಳದಮ್ಮಡಿ ಸಮ್ಮೇಳದೊಡನೆ ಆ ನೀಲಶ್ಯಾಮನ ಭಜಿಪರಾಳಿನಾಳನುಕಂಡು ಕಾಲನಾಲುಗಳೆಂದ್ಹೇಳದೆ ಬನ್ನಿರೆಂದು 1 

ಮಂದಿರಂಗಳದಿ ವೃಂದಾವನ ದಂದ ಕಂಡಾಕ್ಷಣದಿ ಸಿಂಧುಶಯನ ಬಂಧುಭಕ್ತರ ಮಂದಿರವಿದೆಂದು ಹಿಂದಕ್ಕೆ ನೋಡದೆ ಸಂದ್ಹಿಡಿದೋಡಿ ಪುರ ಬಂದು ಸೇರಿರೆಂದು 2 

ಪರರಂಗನೆಯರ ಸ್ಮರಿಸುವ ಪರಮ ನೀಚರನ್ನು ನರಹರಿ ಸ್ಮರಣೆಯ ಅರಿಯದ ಆಧಮರ ಕರುಣಿಸದೆ ತುಸುಮುರಿದು ಮುಸುಕಿಕಟ್ಟಿ ದರದರನೆಳೆತಂದು ಉರಿಯೊಳ್ಪೊಯಿರೆಂದು 3 

ಪರದ್ರವ್ಯವಪಹರಿಸಿ ಲಂಚದಿಂದ ಸರುವ ತನ್ನದೆನಿಸಿ ನಿರುತ ಮಡದಿಮಕ್ಕಳೊರೆವ ದುರಾತ್ಮನರ ಗುರುತಳನೆಳತಂದು ಕರಿಗಿದಸೀಸಬಾಯೊಳ್ ವೆರಸಿ ಜನಕಕೊಂಡದುರುಳಿಸಿಬಿಡಿರೆಂದು 4 

ವೇಣು ಕರದಿ ಪಿಡಿದು ಬಾಣಾರಿ ಧ್ಯಾನದೊಳಗೆ ಬರೆದು ಜಾನಕೀಶನ ಲೀಲೆ ಗಾನದಿಂ ಪಾಡುತ ಆನಂದಿಪ ಮಹಜ್ಞಾನಿಗಳನು ಕಂಡು ಕಾಣದಂತೆ ಸಿಕ್ಕ ಜಾಣ್ಣುಡಿದೋಡಿರೆಂದು 5 

ಇಂದಿರೇಶನದಿನದಿ ಅನ್ನವನು ತಿಂದ ಮೂಢರ ಭರದಿ ತಂದು ಒದೆದು ಮಹಗಂಧಮದು ರ್ಗಂಧನಾರುವ ಮಲತಿಂದು ಬದುಕಿರೆಲೊ ಎಂದು ಮನೆಹೊರಗಿನ ಮಂದಿರದಿಡಿರೆಂದು 6 

ವಿಮಲ ತುಳಸೀಮಣಿಯ ಧರಿಸಿ ಅಮಿತ ಮಹಿಮನ ಚರಿಯ ವಿಮಲಮನಸರಾಗಿ ಕ್ರಮದಿ ಬರುವ ಶ್ರೀ ರಾಮದಾಸರ ಪಾದಕಮಲಗಳನು ಕಂಡು ಯಮದೂತರೆನ್ನದೆ ನಮಿಸಿ ಬನ್ನಿರೆಂದು 7

***