Showing posts with label ಹರಿಸ್ಮರಿಸಿ ಹರಿ ಭಜಿಸಿ ಹರಿಯ ಮನ purandara vittala. Show all posts
Showing posts with label ಹರಿಸ್ಮರಿಸಿ ಹರಿ ಭಜಿಸಿ ಹರಿಯ ಮನ purandara vittala. Show all posts

Saturday 7 December 2019

ಹರಿಸ್ಮರಿಸಿ ಹರಿ ಭಜಿಸಿ ಹರಿಯ ಮನ purandara vittala

ರಾಗ ಕಾಂಭೋಜ. ಝಂಪೆ ತಾಳ

ಹರಿ ಸ್ಮರಿಸಿ ಹರಿ ಭಜಿಸಿ ಹರಿಯ ಮನದೊಳಗಿರಿಸಿ
ಹರಿ ಪಾದವಾಶ್ರಯಿಸಿ ಹರಿದಾಸನೆಂದೆನಿಸಿ ||ಪ||

ಘೋರಕರ್ಮವ ಮಾಡಿ ಅನುಭವಿಸಿದಜಮಿಳ
ಕಡುಮೋಹದಿ ನಾರಾಯಣನ ನೆನೆದು
ಹರಿ ಮಹಾಮಹಿಮನಾ ಚರಣದುಗುರಿನ ಧ್ಯಾನ
ಸಿರಿ ಬ್ರಹ್ಮ ಶಿವರೆಲ್ಲ ಮಾಡುತಲಿಹರು ||

ಅಸುರ ಕುಲದಲಿ ಜನಿಸಿ ಮಧ್ವಮತ ಅನುಸರಿಸಿ
ಅದ್ವೈತ ಐಕ್ಯವೆಂದು ಪೇಳುವರ ಸಂಹ-
ರಿಸಿ ವಿಷ್ಣು ಪದವನಾಶ್ರಯಿಸಿ ಅನ್ಯಮತ
ಹುಸಿಯೆನಿಸಿ ಪ್ರಹ್ಲಾದ ನರಸಿಂಹಭಕ್ತನೆಂದೆನಿಸಿ ||

ಭೂಪತಿ ಪ್ರಾರಬ್ಧ ಕರ್ಮದಲಿ ಮುನಿ-
ಶಾಪದಿಂದ ಗಜಯೋನಿ ಜನಿಸಿ ಹಲವು
ಕಾಲ ಜಲದೊಳಗಾನೆಗಳ ಬಾಯಲಿ ಸಿಲುಕಿ
ಪುರಂದರವಿಠಲನ್ನ ನಿಜಪದವಿ ಸೇರಿದ ||
***

pallavi

hari smarisi hari bhajisi hariya manadoLagirisi hari pAdavAshrayisi haridAsanendenisi

caraNam 1

ghOra karmava mADi anubhavisidajamiLa kaDu mOhadi nArAyaNana nenedu
hari mahA mahimanA caraNadugurina dhyAna siri brahma shivarella mADutaliharu

caraNam 2

asura kuladali janisi madhvamata anusarisi advaita aikyavendu pELuvara samharisi
viSNu padavanAshrayisi anyamatahusiyenisi prahlAda narasimha bhaktanendenisi

caraNam 3

bhUpati prArabda karmadali muni shApadinda gajayOni janisi halavu
kAla jaladoLagA negaLa bAyali siluki purandara viTTalanna nija padavi sErida
***