Showing posts with label ನಾರೇರೆಲ್ಲ ಮುತ್ತಿನಾರತಿ ಬೆಳಗಿರೆ ಶ್ರೀ ಕೃಷ್ಣಮೂರುತಿಗೆ namagiri. Show all posts
Showing posts with label ನಾರೇರೆಲ್ಲ ಮುತ್ತಿನಾರತಿ ಬೆಳಗಿರೆ ಶ್ರೀ ಕೃಷ್ಣಮೂರುತಿಗೆ namagiri. Show all posts

Thursday, 5 August 2021

ನಾರೇರೆಲ್ಲ ಮುತ್ತಿನಾರತಿ ಬೆಳಗಿರೆ ಶ್ರೀ ಕೃಷ್ಣಮೂರುತಿಗೆ ankita namagiri

 ..

kruti by ವಿದ್ಯಾರತ್ನಾಕರತೀರ್ಥರು vidyaratnakara teertharu 


ನಾರೇರೆಲ್ಲ ಮುತ್ತಿನಾರತಿ ಬೆಳಗಿರೆ

ಶ್ರೀ ಕೃಷ್ಣಮೂರುತಿಗೆ ಪ


ನಾರೀಮಣಿ ಶ್ರೀ ರುಕ್ಮಿಣೀದೇವಿಗೆ

ಮತ್ತು ಭೂಮಾಮಣಿಗೆ ಅ.ಪ


ಪನ್ನಗಪತಿ ಫಣಿಯನ್ನು ತುಳಿಯುತಲಿ

ಚನ್ನಾಗಿ ಕುಣಿದವಗೆ

ಸನ್ನುತ ನಿಜ ಜನರನ್ನು ಸಲಹುವ

ಮನ್ಮಥ ಜನಕನಿಗೆ 1


ಪಾರ್ಥಗೆ ಸಖನಾಗಿ ಧಾರ್ತರಾಷ್ಟ್ರನ ಹಠ

ವ್ಯರ್ಥ ಮಾಡಿದವಗೆ

ಆರತಿ ಎತ್ತಿರೆ ಶುಭಕೀರ್ತನೆ ಮಾಡುತ

ಪಾರ್ಥಸಖನ ಸತಿಗೆ 2


ಚಂಡಮುನಿಯು ಬೇಡಿಕೊಂಡ ವರವನಿತ್ತ

ಪಾಂಡವರ ಕಾಯ್ದವಗೆ

ಪುಂಡರೀಕದಳಲೋಚನಗೆ

ಜಗದಂಡಪತಿಯ ಸತಿಗೆ3


ವಾಮಲೋಚನರೆಲ್ಲಾ ನಾಮಗಿರೀಶ ಶ್ರೀ

ನರಸಿಂಹ ಮೂರುತಿಗೆ

ಪ್ರೇಮ ಮಾಡುವನೆಂದು ಕಾಮಿನಿಯರೇ ಸತ್ಯ

ಭಾಮಾಸಹಿತನಿಗೆ 4

***