ಎಲ್ಲಮ್ಮ ನೆನಬೇಡವೆ ಸಿರಿದೇವಿ
ಎಲ್ಲಾರ ಅಮ್ಮನಲ್ಲವೇ ||ಪ||
ಬಲ್ಲಿದರಾಗಿಪ್ಪ ಬ್ರಹ್ಮಾದಿಗಳಿಗೆಲ್ಲ
ಶ್ರೀ ಲಕುಮಿಯೇ ಅಮ್ಮನಲ್ಲದೆ ಮತ್ತಿಲ್ಲ ||ಅ.ಪ||
ಆಲದಲೆಯ ಮೇಲೆ ಪರಮ ಪುರುಷನು ಅಂದು
ಕಾಲವರಿತು ಬಂದು ಪವಡಿಸಲು
ವಾಲಗವನು ಮಾಡಿ ಕೊಂಡಾಡಿ ಜೀವರ ಮೂಲ
ಕರ್ಮಂಗಳಂತಿರುವಂತೆ ಮಾಡಿದ ||೧||
ಅಮೋಘ ವಿರ್ಯವ ಗರ್ಭದಿ ಧರಿಸಿ ತಾ
ಬ್ರಹ್ಮಾಂಡವೆ ಪೆತ್ತ ಲೋಕ ಮಾತಾ
ಸುಮನಸರಿಗೆ ಕಡೆಗಣ್ಣ ನೋಟದಿ
ಆ ಮಹಾ ಪದವಿಯ ಕೊಡುವ ಭಾಗ್ಯವಂತೆ ||೨||
ಎರಡೊಂದು ಗುಣದಿಂದ ಪ್ರವಿಷ್ಠಳಾಗಿ
ಜೀವರ ಯೋಗ್ಯತೆಯಂತೆ ಪಾಲಿಪಳು
ಪರಮ ಪರುಷ ನಮ್ಮ ವಿಜಯ ವಿಠಲನ
ಕರುಣದಿಂದಲಿ ಅನಂತ ಕಲ್ಪಕೆ ನಿತ್ಯ ||೩||
***
Ellamma nenabedave siridevi
ellara ammanallavēke ||pa||
Ballidaragippa brahmadigaligella
sri lakumiye ammanallade mattilla ||a.pa||
Aladaleya mele parama purushanu andu
kalavaritu bandu pavadisalu
valagavanu madi kondadi jivara mula
karmangalantiruvante madida ||1||
Amogha viryava garbhadi dharisi ta
brahmandave petta loka mata
sumanasarige kadeganna notadi
a maha padaviya koduva bhagyavante ||2||
Eradondu gunadinda pravishthalagi
jivara yogyateyante palipaḷu
parama paruṣa namma vijaya viṭhalana
karunadindali ananta kalpake nitya ||3||
***