ಧೀರ ಶೂರನ್ನ ಗುಣಗಂಭೀರ ಶೂರನ್ನಪೋರತನದ ಈ ನಾರಿಯರನೆಚ್ಚದಿರು ವೀರ ಶೂರನ್ನ ಪ
ಎಲ್ಲ ಮಂಗಳಕಾರ್ಯ ಕಲ್ಲು ಒರಳು ಪೂಜೆ ಬಲ್ಲನಾರಿಯರು ನಗದಿರಿಬಲ್ಲ ನಾರಿಯರು ನಗದಿರಿ ಲಕ್ಷ್ಮಿವಲ್ಲಭಇದಕೆ ಒಲಿಯಲಿ 1
ಪಂಕಜ ಮುಖಿಯರ ಗರುವ ಕಲ್ಲೊಳು ತುಂಬಿ ಕುಂಕುಮ ಮಾಡಿ ಅರೆದೆವಕುಂಕುಮ ಮಾಡಿ ಅರೆದು ಬೀಸಿದೆವಮ್ಮ ಪಂಕಜನಾಭ ಒಲಿಯಲಿ2
ಸರಸಿಜಾಕ್ಷಿಯರ ಗರುವು ತರಿಸಿಕಲ್ಲೊಳು ತುಂಬಿ ಅರಿಷಿಣ ಮಾಡಿ ಅರೆದೆವ ಅರಿಷಿಣ ಮಾಡಿ ಅರೆದು ಬೀಸಿದೆವಮ್ಮಸರಸಿಜನಾಭಒಲಿಯಲಿ 3
ಮಂದಗಮನೆಯರ ಗರ್ವ ತಂದು ಕಲ್ಲೊಳು ತುಂಬಿ ಗಂಧವ ಮಾಡಿ ಅರೆದೆವಗಂಧವ ಮಾಡಿ ಅರೆದು ಬೀಸಿದೆವಮ್ಮಇಂದಿರೆಯರಸು ಒಲಿಯಲಿ4
ಧಿಟ್ಟೆರಿಬ್ಬರ ಗರವು ಅಷ್ಟುಕಲ್ಲೊಳು ತುಂಬಿ ಬುಕ್ಕಿಟ್ಟು ಮಾಡಿ ಅರೆದೆವಬುಕ್ಕಿಟ್ಟು ಮಾಡಿ ಅರೆದು ಬೀಸಿದೆವಮ್ಮ ಧಿಟ್ಟ ರಾಮೇಶÀ ಒಲಿಯಲಿ 5
***