Showing posts with label ವಂದೇ ಬ್ರಹ್ಮಣ್ಯತೀರ್ಥಂ ಶುಭತಮ shree krishna brahmanya teertha stutih. Show all posts
Showing posts with label ವಂದೇ ಬ್ರಹ್ಮಣ್ಯತೀರ್ಥಂ ಶುಭತಮ shree krishna brahmanya teertha stutih. Show all posts

Saturday, 1 May 2021

ವಂದೇ ಬ್ರಹ್ಮಣ್ಯತೀರ್ಥಂ ಶುಭತಮ ankita shree krishna brahmanya teertha stutih

ಶ್ರೀಬ್ರಹ್ಮಣ್ಯತೀರ್ಥಪಂಚರತ್ನಮಾಲಿಕಾಸ್ತೋತ್ರಂ 


ವಂದೇ ಬ್ರಹ್ಮಣ್ಯತೀರ್ಥಂ ಶುಭತಮಚರಿತಂ ಸೇವಿತಶ್ರೀಸಮೇತಂ

 ಶಾಂತಂ ದಾಂತಂ ಮಹಾಂತಂ ಗುರುಗುಣಭರಿತಂ ಯೋಗಿಸಂಘೈರುಪೇತಮ್। ಕಾಮಕ್ರೋಧಾದ್ಯತೀತಂ ಕುಮತಿಭಿರಜಿತಂ ಕಲ್ಮಶಾಂಭೋಧಿಪೋತಂ 

ಧೀರಂ ಭೂದೇವಗೀತಂ ಶುಭಜನಮಹಿತಂ ಧನ್ಯಮಾನಂ ವಿನೀತಮ್..... ॥1॥


 ಮಾದ್ಯನ್ಮಾಯಿಗಜೇಂದ್ರಪಂಚವದನಃ ಪ್ರಖ್ಯಾತಕೀರ್ತಿರ್ಮಹಾನ್। ಶ್ರೀಮದ್ವಿಟ್ಠಲಪಾದಪದ್ಮಮಧುಪಃ ಸರ್ವೇಷ್ಟಚಿಂತಾಮಣಿಃ। ನಿರ್ವ್ಯಾಜೋರುದಯಾಕಟಾಕ್ಷಲಸಿತೋ ಜ್ಞಾನಾದಿಭಾಗ್ಯೋಜ್ಜ್ವಲಃ ಶ್ರೀಬ್ರಹ್ಮಣ್ಯಯತೀಂದ್ರಮಸ್ತಕಮಣಿಃ ಪಾಯಾದಪಾಯಾತ್ ಸ ಮಾಮ್.....॥2॥


ಬಿಭ್ರತ್ಕಾಷಾಯಚೇಲಂ ವಿಲಸಿತತುಲಸೀಪಂಕಜಾಕ್ಷಾದಿಮಾಲಂ

 ಧೂತಾಜ್ಞಾನಾಘಜಾಲಂ ಮೃದುವಚನಕಲಂ ಚಾರುಸೌಂದರ್ಯಶೀಲಮ್। ಆರ್ತತ್ರಾಣೈಕಲೋಲಂ ಪ್ರಣತಮುನಿಕುಲಂ ವೈಷ್ಣವಾಗ್ರ್ಯಾನುಕೂಲಂ ಬ್ರಹ್ಮಣ್ಯಾರ್ಯಂ ದಯಾಲುಂ ಸ್ಮಿತಮುಖಕಮಲಂ ಸಾದರಂ ತಂ ಭಜೇಽಲಮ್..... ॥3॥


 ಯದ್ವೃಂದಾವನದರ್ಶನೇನ ನಿತರಾಂ ಪಾಪಾನಿ ಯಾಂತಿ ಕ್ಷಯಂ ಯದ್ವೃಂದಾವನಮೃತ್ತಿಕಾ ಸುವಿಧೃತಾ ತಾಪತ್ರಯಧ್ವಂಸಿನೀ। ಯದ್ವೃಂದಾವನಸೇವಯಾ ಭುವಿ ಜನಃ ಪ್ರಾಪ್ನೋತಿ ವಿದ್ಯಾಂ ಸುಖಂ ಸರ್ವಾರಿಷ್ಟನಿವೃತ್ತಯೇಽಸ್ತು ಸ ಚ ಮೇ ಬ್ರಹ್ಮಣ್ಯತೀರ್ಥೋ ಗುರುಃ ... ॥4॥

 ಕುಷ್ಠಶ್ವೇತೋರುಗುಲ್ಮಕ್ಷಯಕಠಿಣತರವ್ಯಾಧಿವೈದ್ಯಾಧಿನಾಥೋ ಭೂತಪ್ರೇತಗ್ರಹೋಚ್ಛಾಟನಕುಶಲಮಹಾಮಂತ್ರಮೂರ್ತಿರ್ಮುನೀಂದ್ರಃ। 

ಸರ್ವಾಭೀಷ್ಟಪ್ರದಾತಾ ಸರಸಸುಹೃದಯಃ ಪುಣ್ಯಚಾರಿತ್ರನಾಮಾ। ಭೂಯಾದ್ಬ್ರಹ್ಮಣ್ಯತೀರ್ಥೋ ಗುರುಕುಲತಿಲಕೋ ಭೂಯಸೇ ಶ್ರೇಯಸೇ ಮೇ॥5॥ ॥


ಇತಿ ಶ್ರೀವ್ಯಾಸರಾಜಯತಿ ವಿರಚಿತ ಶ್ರೀ ಬ್ರಹ್ಮಣ್ಯತೀರ್ಥಪಂಚರತ್ನಮಾಲಿಕಾ ಸ್ತೋತ್ರಂ ಸಂಪೂರ್ಣಂ ಶ್ರೀ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಭೈಷ್ಮೀ ಸತ್ಯಭಾಮಾ ಸಮೇತ ಶ್ರೀ ಕೃಷ್ಣಾರ್ಪಣಮಸ್ತು.... 

*****


ವಂದೇ ಬ್ರಹ್ಮಣ್ಯತೀರ್ಥಂ ಶುಭತಮ

ಚರಿತಂ ಸೇವಿತ ಶ್ರೀ ಸಮೇತಂ

ಶಾಂತಂ ದಾಂತಂ ಮಹಾಂತಂ 

ಗುರು ಗುಣ ಭರಿತಂ ಯೋಗಿ ಸಂಗೈರುಪೇತಂ ।

ಕಾಮಕ್ರೋಧಾದ್ಯತೀತಂ ಕುಮತಿಭಿರಜಿತಂ 

ಕಲ್ಮಷಾ೦ಬೋಧಿಪೋತಮ್

ಧೀರಂ ಭೂದೇವಗೀತಂ ಶುಭಜನ 

ಮಹಿತಂ ಧನ್ಯಮಾನಂ ವಿನೀತಮ್ ।। 1 ।। 


ಮಾದ್ಯಾನ್ಮಾಯಿಗಜೇಂದ್ರ ಪಂಚವದನಃ 

ಪ್ರಖ್ಯಾತ ಕೀರ್ತಿರ್ಮಹಾನ್

ಶ್ರೀಮದ್ವಿಠ್ಠಲಪಾದಪದ್ಮ 

ಮಧುಪಃ ಸರ್ವೇಷ್ಟ ಚಿಂತಾಮಣಿ: ।

ನಿರ್ವ್ಯಾಜೋರುದಯಾಕಟಾಕ್ಷಲಸಿತೋ 

ಜ್ಞಾನಾದಿ ಭಾಗ್ಯೋಜ್ವಲ:

ಶ್ರೀಬ್ರಹ್ಮಣ್ಯಯತೀಂದ್ರ ಮಸ್ತಕಮಣಿ:

ಪಾಯಾದಪಾಯಾತ್ಸಮಾಮ್ ।। 2 ।। 


ಭಿಬ್ರತ್ಕಾಷಾಯಚೇಲಂ ವಿಲಸಿತ ತುಲಸೀ

ಪಂಕಜಾಕ್ಷಾದಿ ಮಾಲಮ್

ಧೂತಾಜ್ಞಾನಾಘಜಾಲಂ ಮೃಧು 

ವಚನ ಕಲಂ ಚಾರು ಸೌಂದರ್ಯಶೀಲಮ್ ।

ಆರ್ತತ್ರಾಣೈಕಲೋಲ೦ ಪ್ರಣತ 

ಮುನಿಕುಲಂ ವೈಷ್ಣವಾಗ್ರ್ಯಾನುಕೂಲಂ

ಬ್ರಹ್ಮಣ್ಯಾರ್ಯ೦ ದಯಾಲು೦ ಸ್ಮಿತಮುಖ 

ಕಮಲಂ ಸಾದರಂ ತಂ ಭಜೇSಲಮ್ ।। 3 ।। 


ಯದ್ವೃಂದಾವನ ದರ್ಶನೇನ ನಿತರಾಂ 

ಪಾಪಾನಿ ಯಾಂತಿ ಕ್ಷಯಮ್

ಯದ್ವೃಂದಾವನ ಮೃತ್ತಿಕಾ 

ಸುವಿಧೃತಾ ತಾಪತ್ರಯಧ್ವಂಸಿನೀ ।

ಯದ್ವೃಂದಾವನ ಸೇವಯಾ ಭುವಿ ಜನಃ 

ಪ್ರಾಪ್ನೋತಿ ವಿದ್ಯಾ೦ ಸುಖಂ

ಸರ್ವಾರಿಷ್ಟ ನಿವೃತ್ತಯೇSಸ್ತು 

ಸ ಚ ಮೇ ಬ್ರಹ್ಮಣ್ಯತೀರ್ಥೋ ಗುರು: ।। 4 ।। 


ಕುಷ್ಠಶ್ವೇತೋರುಗುಲ್ಮಕ್ಷಯ 

ಕಠಿಣತರ ವ್ಯಾಧಿವೈದ್ಯಾಧಿನಾಥೋ

ಭೂತಪ್ರೇತ ಗ್ರಹೋಚ್ಛಾಟನ ಕುಶಲ 

ಮಹಾಮಂತ್ರ ಮೂರ್ತಿರ್ಮುನೀಂದ್ರ: ।

ಸರ್ವಾಭೀಷ್ಟ ಪ್ರದಾತಾ ಸುಹೃದಯಃ

ಪುಣ್ಯ ಚಾರಿತ್ರ ನಾಮಾ

ಭೂಯಾದ್ಬ್ರಹ್ಮಣ್ಯತೀರ್ಥೋ ಗುರುಕುಲತಿಲಕೋ 

ಭೂಯಾಸೇ ಶ್ರೇಯಸೇ ಮೇ ।। 5 ।।

***

explanation by sri ಆಚಾರ್ಯ ನಾಗರಾಜು ಹಾವೇರಿ 

ಗುರು ವಿಜಯ ಪ್ರತಿಷ್ಠಾನ 

ಶ್ರೀ ವ್ಯಾಸರಾಜರ ಕಣ್ಣಲ್ಲಿ ಶ್ರೀ ಬ್ರಹ್ಮಣ್ಯತೀರ್ಥರ ವೈಭವ 

ವಂದೇ ಬ್ರಹ್ಮಣ್ಯತೀರ್ಥಂ ಶುಭತಮ

ಚರಿತಂ ಸೇವಿತ ಶ್ರೀ ಸಮೇತಂ

ಶಾಂತಂ ದಾಂತಂ ಮಹಾಂತಂ 

ಗುರು ಗುಣ ಭರಿತಂ ಯೋಗಿ ಸಂಗೈರುಪೇತಂ ।

ಕಾಮಕ್ರೋಧಾದ್ಯತೀತಂ ಕುಮತಿಭಿರಜಿತಂ 

ಕಲ್ಮಷಾ೦ಬೋಧಿಪೋತಮ್

ಧೀರಂ ಭೂದೇವಗೀತಂ ಶುಭಜನ 

ಮಹಿತಂ ಧನ್ಯಮಾನಂ ವಿನೀತಮ್ ।। 1 ।। 

ಶುಭತಮ ಚರಿತರಾದ - ಶ್ರೀ ಲಕ್ಷ್ಮೀ ನಾರಾಯಣನನ್ನು ಸೇವಿಸಿದವರೂ - ಶಾಂತರೂ - ದಾಂತರೂ - ಮಹಾತ್ಮರೂ - ಗುರು ಗುಣ ಭರಿತರೂ - ಯೋಗಿ ಸಮೂಹ ಸಮೇತರೂ - ಕಾಮ ಕ್ರೋಧಾದಿಗಳನ್ನು ಅತಿಕ್ರಮಿಸಿದವರೂ - ಕುಮತಿಗಳ ಸಂಬಂಧ ರಹಿತರೂ - ದುರ್ವಾದಿಗಳನ್ನು ಗೆದ್ದವರೂ - ಪಾಪಾ೦ಬುಧಿಯನ್ನು ದಾಟಿಸಲು ತೆಪ್ಪದಂತೆ ಇರುವವರೂ - ಧೀರರೂ - ಭೂಸುರರಿಂದ ಸ್ತುತಿಸಲ್ಪಡುವವರೂ - ಸುಜನರಿಂದ ಮಹಿತರೂ - ಶ್ಲಾಘ್ಯವಾದ ಜ್ಞಾನ ಉಳ್ಳವರೂ - ವಿನೀತರೂ ಆದ ಶ್ರೀ ಬ್ರಹ್ಮಣ್ಯತೀರ್ಥರನ್ನು ವಂದಿಸುತ್ತೇನೆ! 

ಮಾದ್ಯಾನ್ಮಾಯಿಗಜೇಂದ್ರ ಪಂಚವದನಃ 

ಪ್ರಖ್ಯಾತ ಕೀರ್ತಿರ್ಮಹಾನ್

ಶ್ರೀಮದ್ವಿಠ್ಠಲಪಾದಪದ್ಮ 

ಮಧುಪಃ ಸರ್ವೇಷ್ಟ ಚಿಂತಾಮಣಿ: ।

ನಿರ್ವ್ಯಾಜೋರುದಯಾಕಟಾಕ್ಷಲಸಿತೋ 

ಜ್ಞಾನಾದಿ ಭಾಗ್ಯೋಜ್ವಲ:

ಶ್ರೀಬ್ರಹ್ಮಣ್ಯಯತೀಂದ್ರ ಮಸ್ತಕಮಣಿ:

ಪಾಯಾದಪಾಯಾತ್ಸಮಾಮ್ ।। 2 ।। 

ಮದಿಸಿದ ಮಾಯಾವಾದಿಗಳೆಂಬ ಗಜೇಂದ್ರಗಳಿಗೆ ಸಿಂಹ ಸದೃಶರೂ - ಪ್ರಖ್ಯಾತ ಕೀರ್ತಿವಂತರೂ - ಉತ್ತಮರೂ - ಶ್ರೀ ವಿಠಲನ ಪಾದ ಕಮಲ ಭೃಂಗಾಯಮಾನರೂ - ಸರ್ವರ ಇಷ್ಟವನ್ನೂ ನೆರವೇರಿಸುವ ಚಿಂತಾಮಣಿಗಳೂ - ನಿರ್ವಾಜ್ಯವೂ ಮತ್ತು ಪೂರ್ಣವೂ ಆದ ಕೃಪಾ ಕಟಾಕ್ಷದಿಂದ ಶೋಭಿತರೂ - ಜ್ಞಾನದಿ ಸಂಪತ್ತುಗಳಿಂದ ಶೋಭಿತರೂ ಆದ ಶ್ರೀ ಬ್ರಹ್ಮಣ್ಯತೀರ್ಥ ಯತೀಂದ್ರ ಶಿರೋಮಣಿಗಳು ನನ್ನನ್ನು ಅಪಾಯಗಳಿಂದ ಪಾರು ಮಾಡಲಿ!! 

ಭಿಬ್ರತ್ಕಾಷಾಯಚೇಲಂ ವಿಲಸಿತ ತುಲಸೀ

ಪಂಕಜಾಕ್ಷಾದಿ ಮಾಲಮ್

ಧೂತಾಜ್ಞಾನಾಘಜಾಲಂ ಮೃಧು 

ವಚನ ಕಲಂ ಚಾರು ಸೌಂದರ್ಯಶೀಲಮ್ ।

ಆರ್ತತ್ರಾಣೈಕಲೋಲ೦ ಪ್ರಣತ 

ಮುನಿಕುಲಂ ವೈಷ್ಣವಾಗ್ರ್ಯಾನುಕೂಲಂ

ಬ್ರಹ್ಮಣ್ಯಾರ್ಯ೦ ದಯಾಲು೦ ಸ್ಮಿತಮುಖ 

ಕಮಲಂ ಸಾದರಂ ತಂ ಭಜೇSಲಮ್ ।। 3 ।। 

ಕಾಷಾಯ ವಸ್ತ್ರವನ್ನು ಧರಿಸಿರುವವರೂ - ಉತ್ತಮವಾದ ತುಳಸೀ ಮತ್ತು ಪ್ರಕಾಶಮಾನವಾದ ಕಮಲಕ್ಷ್ಯಾದಿ ಮಣಿ ಮಾಲೆಗಳನ್ನು ಧರಿಸಿರುವವರೂ - ಅಜ್ಞಾನ ಮತ್ತು ಪಾಪ ಜಾಲವನ್ನು ಪರಿಹರಿಸುವವರೂ - ಹಿತ ವಚನ ಕಲಾಭಿಜ್ಞರೂ - ಸ್ವಭಾವತಃ ಪರಮ ಸುಂದರರೂ - ಆರ್ತರನ್ನು ರಕ್ಷಿಸುವುದರಲ್ಲೇ ಪರಮಾಸಕ್ತಿಯುಳ್ಳವರೂ - ಮುನಿ ಸಮುದಾಯದಿಂದ ನಮಸ್ಕೃತರೂ - ವೈಷ್ಣವರಿಗೆ ಶ್ರೇಷ್ಠವಾದ ಸೌಕರ್ಯಕರರೂ - ಮಂದಹಾಸದಿಂದ ಕೂಡಿದ ಮುಖ ಕಮಲ ಉಳ್ಳವರೂ - ಅನುಗ್ರಹಕರರೂ ಆದ ಶ್ರೀ ಬ್ರಹ್ಮಣ್ಯತೀರ್ಥರನ್ನು ವಿಶೇಷ ಮರ್ಯಾದಾ ಪೂರ್ವಕ ಸಂಪೂರ್ಣ ಮನಸ್ಸಿನಿಂದ ಭಜಿಸುತ್ತೇನೆ!!! 

ಯದ್ವೃಂದಾವನ ದರ್ಶನೇನ ನಿತರಾಂ 

ಪಾಪಾನಿ ಯಾಂತಿ ಕ್ಷಯಮ್

ಯದ್ವೃಂದಾವನ ಮೃತ್ತಿಕಾ 

ಸುವಿಧೃತಾ ತಾಪತ್ರಯಧ್ವಂಸಿನೀ ।

ಯದ್ವೃಂದಾವನ ಸೇವಯಾ ಭುವಿ ಜನಃ 

ಪ್ರಾಪ್ನೋತಿ ವಿದ್ಯಾ೦ ಸುಖಂ

ಸರ್ವಾರಿಷ್ಟ ನಿವೃತ್ತಯೇSಸ್ತು 

ಸ ಚ ಮೇ ಬ್ರಹ್ಮಣ್ಯತೀರ್ಥೋ ಗುರು: ।। 4 ।। 

ಯಾರ ವೃಂದಾವನ ದರ್ಶನದಿಂದ ಪಾಪಗಳು ನಿಶ್ಯೇಷವಾಗಿ ನಾಶ ಹೊಂದುವುವೋ - ಯಾರ ವೃಂದಾವನ ಮೃತ್ತಿಕೆಯು ಭಕ್ತಿಯಿಂದ ಧರಿಸಲ್ಪಟ್ಟರೆ ತಾಪತ್ರಯಗಳನ್ನು ಧ್ವಂಸ ಮಾಡುವುದೋ - ಯಾರ ವೃಂದಾವನ ಸೇವೆಯಿಂದ ಭೂಮಿಯಲ್ಲಿ ಜನರು ವಿದ್ಯಾ ಸುಖಗಳನ್ನು ಹೊಂದುವರೋ ಅಂಥಹಾ ಶ್ರೀ ಬ್ರಹ್ಮಣ್ಯತೀರ್ಥ ಗುರುಗಳು ನನ್ನ ದುರದೃಷ್ಟಗಳನ್ನು ನಿವೃತ್ತಿ ಮಾಡಲಿ!!!! 

ಕುಷ್ಠಶ್ವೇತೋರುಗುಲ್ಮಕ್ಷಯ 

ಕಠಿಣತರ ವ್ಯಾಧಿವೈದ್ಯಾಧಿನಾಥೋ

ಭೂತಪ್ರೇತ ಗ್ರಹೋಚ್ಛಾಟನ ಕುಶಲ 

ಮಹಾಮಂತ್ರ ಮೂರ್ತಿರ್ಮುನೀಂದ್ರ: ।

ಸರ್ವಾಭೀಷ್ಟ ಪ್ರದಾತಾ ಸುಹೃದಯಃ

ಪುಣ್ಯ ಚಾರಿತ್ರ ನಾಮಾ

ಭೂಯಾದ್ಬ್ರಹ್ಮಣ್ಯತೀರ್ಥೋ ಗುರುಕುಲತಿಲಕೋ 

ಭೂಯಾಸೇ ಶ್ರೇಯಸೇ ಮೇ ।। 5 ।। 

ಕುಷ್ಠ - ಶ್ವೇತ - ಹೊಟ್ಟೆಯೊಳಗಿನ ಗಂಟು ಬೇನೆ [ Cancer ]  ಕ್ಷಯ ಮೊದಲಾದ ಕಠಿಣತರ ವ್ಯಾಧಿಗಳನ್ನು ನಾಶ ಪಡಿಸುವ ವೈದ್ಯ ಕುಲ ಗುರುಗಳಾದ - ಭೂತ ಪ್ರೇತ ಗ್ರಹಗಳನ್ನು ಓಡಿಸುವುದರಲ್ಲಿ ಸಮರ್ಥರಾದ - ಮಹಾ ಮಂತ್ರಗಳೇ ಮೂರ್ತಿವೆತ್ತಂತಿರುವ ಮುನೀಂದ್ರರೂ - ಸರ್ವಾಭೀಷ್ಟ ಪ್ರದಾತೃಗಳೂ - ಕರುಣಾ ಸಂಪೂರ್ಣ ಹೃದಯರೂ - ಪುಣ್ಯಕರವಾದ ನಡೆ ನುಡಿಗಳಲ್ಲಿ ಹೆಸರಾದವರೂ - ಸ್ವಯಂ ಸಂಶಯ ರಹಿತರಾಗಿ ಮತ್ತೊಬ್ಬರ ಸಂಶಯಗಳನ್ನು ನಿವಾರಿಸುವ ಜ್ಞಾನಿಗಳಿಗೆ ಭೂಷಣರೂ - ಗುರು ತಿಲಕರೂ ಆದ ಶ್ರೀ ಬ್ರಹ್ಮಣ್ಯತೀರ್ಥರು ನನ್ನ ಅಧಿಕವಾದ ಶ್ರೇಯಸ್ಸಿಗೆ ಕಾರಣವಾಗಲೀ!!!!! 

****