Showing posts with label ನಾರಿರನ್ನಳೆ ಕಂಡೆಯ ವಾರಿಜನಾಭ ದೇವರದೇವ ಸುಗುಣ purandara vittala. Show all posts
Showing posts with label ನಾರಿರನ್ನಳೆ ಕಂಡೆಯ ವಾರಿಜನಾಭ ದೇವರದೇವ ಸುಗುಣ purandara vittala. Show all posts

Thursday, 5 December 2019

ನಾರಿರನ್ನಳೆ ಕಂಡೆಯ ವಾರಿಜನಾಭ ದೇವರದೇವ ಸುಗುಣ purandara vittala

ರಾಗ ರೇಗುಪ್ತಿ ತ್ರಿಪುಟ ತಾಳ 

ನಾರಿರನ್ನಳೆ ಕಂಡೆಯ ||ಪ||
ವಾರಿಜನಾಭ ದೇವರದೇವ ಸುಗುಣ

ಬೇಲೂರ ಚೆನ್ನಿಗರಾಯನ, ಎನ್ನ ಪ್ರಿಯನ ||ಅ||

ಹೊಸಬಗೆ ಮಾಟದ, ಪೊಳೆವ ಕಿರೀಟದ
ಎಸೆವ ಮಾಣಿಕದೋಲೆಯ
ಶಶಿಕಾಂತಿಗಧಿಕವೆಂದೆನಿಪ ಮೂಗುತಿಯಿಟ್ಟ
ಬಿಸಜಾಕ್ಷ ಚೆನ್ನಿಗರಾಯನ, ಎನ್ನ ಪ್ರಿಯನ ||

ತಿದ್ದಿದ ಕಸ್ತೂರಿ ತಿಲಕದಿಂದೊಪ್ಪುವ
ಮುದ್ದು ಮೊಗದ ಸೊಂಪಿನ
ಹೊದ್ದಿದ ಕುಂಕುಮರೇಖೆ ಪೀತಾಂಬರ
ಪೊದ್ದಿದ ಚೆನ್ನಿಗರಾಯನ, ಎನ್ನ ಪ್ರಿಯನ ||

ಮಘಮಘಿಸುವ ಮಲ್ಲಿಗೆ ಜಾಜಿ ಸಂಪಿಗೆ
ಬಗೆಬಗೆ ಪೂಮಾಲೆಯ
ಅಗರುಚಂದನ ಗಂಧದನುಲೇಪನವ ಗೆಯ್ದ
ಜಗವ ಮೋಹಿಪ ಚೆನ್ನನ, ಆ ಸುಗುಣನ ||

ದನುಜರ ಗಂಡನೆಂದಿನಿಪ ಪೆಂಡೆಯನಿಟ್ಟು
ಮಿನುಗುವ ಪೊಂಗೆಜ್ಜೆಯ
ಘನಶಂಖಚಕ್ರಗದಾಂಕಿತ ಪಿಡಿದ
ಅನುಪಮ ಚೆನ್ನಿಗರಾಯನ, ಚೆಲ್ವ ಕಾಯನ ||

ಲೀಲೆಯಿಂದಲಿ ಬಂದು ವೇಲಾಪುರದಿ ನಿಂತ
ಪಾಲಗಡಲಶಯನ
ಪಾಲನ ಇಂದು ಶ್ರೀಪುರಂದರವಿಠಲ
ಬೇಲೂರ ಚೆನ್ನಿಗರಾಯನ ಬಾಳ ಪ್ರಿಯನ ||
***

pallavi

nArirannaLe kaNDyA

anupallavi

vArijanAbha dEvara dEva suguNa bElUra cennigarAyana enna priyana

caraNam 1

hosa bage mADada poLeva krITada eseva mANikadOleya shashikAnt-
adadhikavendenipa mUgutiyiTTa bisajAkSa cennigarAyana enna priyana

caraNam 2

tiddida kastUri tilakadindoppuva muddu mogada sompina
hoddida kumkuma rEkhe pItAmbara poddida cennigarAyana enna priyana

caraNam 3

makhamakhisuva mallige jAji sampige bagebage pUmAleya
agaru candana gandhadanulEpavana geida jagava mOhiya cennava A suguNana

caraNam 4

danujara gaNDanendinipa peNDeyaniTTu minuguva pongejjeya
ghana shanka cakradAnkita piDida anumana cennigarAyana celva kAyana

caraNam 5

lIleyindali bandu vElApuradi ninta pAlakaDala shayana pAlana
indu shrI purandara viTTala bElUra cennigarAyana bALa priyana
***