ಕಾಖಂಡಕಿ ಶ್ರೀ ಕೃಷ್ಣದಾಸರು
ಮನಮೋಹನ ಮುರಾರಿ ಬಾರೋ ಪ
(ಮಾಮನೋಹರಾ ಮುರಾರಿ ಬಾರೋ)
ಕರಿವರದಾಯಕ ಮರಚಮುಸ್ಥಾಪನ | ಶರಣಾಗತ ಸಹಕಾರಿ ಬಾರೋ | ಸರಸಿಜಾಸನ ವಂದಿತಾಂಘ್ರಿ | ದುರಿ | ತಾಚಲ ವಜ್ರಧಾರಿ ಬಾರೋ 1
ಮನೋಜನಿತ ಜನಕರವಿಂದ ಲೋಚನ | ಮುನಿಜನ ಹೃದಯ ವಿಹಾರಿ ಬಾರೊ| ಘನಮಹಿಮ ಸುದಾಮ ರಕ್ಷಕಕ | ದನುಜಾವಳಿ ಮದಹಾರಿ ಬಾರೋ 2
ಕಾಲ ಪಯೋಧರ | ಮಂದರೋದ್ಧಾರಿ ಬಾರೋ | ನಂದನಾತ್ಮಜ ದೇವ ಮಹಿಪತಿ | ನಂದನ ಪ್ರಭು ಉದಾರಿ ಬಾರೋ3
****