Audio by Mrs. Nandini Sripad
ರಚನೆ : ಶ್ರೀ ಜಗನ್ನಾಥ ದಾಸರು
for saahitya click ಹರಿಕಥಾಮೃತಸಾರ ಸಂಧಿ 1 to 32
"ವಾಸುದೇವನು ಪ್ರಾಣಮುಖ ತತ್ವೇಶರಿಂದಲಿ " ,
ಶ್ರೀಜಗನ್ನಾಥದಾಸಾರ್ಯ ವಿರಚಿತ ಹರಿಕಥಾಮೃತಸಾರ ,
ನಾಡೀಪ್ರಕರಣ ಸಂಧಿ , ರಾಗ ಅಭೋಗಿ
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ
ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು||
ವಾಸುದೇವನು ಪ್ರಾಣಮುಖ ತತ್ವ ಈಶರಿಂದಲಿ ಸೇವೆ ಕೈಕೊಳುತ
ಈ ಶರೀರದೊಳು ಇಪ್ಪ ಮೂವತ್ತಾರು ಸಾವಿರ ಈ ಸುನಾಡಿಗಳೊಳಗೆ
ಈ ಭೂಮೀ ಸಮೇತ ವಿಹಾರಗೈವ
ಪರ ಈಶನ ಅಮಲ ಸುಮೂರ್ತಿಗಳ ಚಿಂತಿಸುತ ಹಿಗ್ಗುತಿರು||1||
ಚರಣಗಳೊಳಿಹ ನಾಡಿಗಳು ಹನ್ನೆರೆಡು ಸಾವಿರ ಮಧ್ಯ ದೇಹದೊಳು ಇರುತಿಹವು ಹದಿನಾಲ್ಕು
ಬಾಹುಗಳೊಳಗೆ ಈರೆರೆಡು ಶಿರದೊಳು ಆರು ಸಹಸ್ರ ಚಿಂತಿಸಿ
ಇರುಳು ಹಗಲು ಅಭಿಮಾನಿ ದಿವಿಜರನರಿತು
ಉಪಾಸನೆಗೈವರು ಇಳೆಯೊಳು ಸ್ವರ್ಗ ವಾಸಿಗಳು||2||
ಬೃಹತಿನಾಮಕ ವಾಸುದೇವನು ವಹಿಸಿ ಸ್ತ್ರೀ ರೂಪ
ದೋಷ ವಿರಹಿತ ಎಪ್ಪತ್ತೆರೆಡು ಸಾವಿರ ನಾಡಿಗಳೊಳಗಿದ್ದು
ದ್ರುಹಿಣ ಮೊದಲಾದ ಅಮರಗಣ ಸನ್ಮಹಿಮ
ಸರ್ವ ಪ್ರಾಣಿಗಳ ಮಹಾಮಹಿಮ ಸಂತೈಸುವನು ಸಂತತ ಪರಮ ಕರುಣಾಳು||3||
ನೂರು ವರ್ಷಕೆ ದಿವಸ ಮೂವತ್ತಾರು ಸಾವಿರ ವಹವು
ನಾಡಿ ಶರೀರದೊಳಗೆ ಇನಿತಿಹವು ಎಂದರಿತು ಒಂದು ದಿವಸದಲಿ
ಸೂರಿಗಳ ಸತ್ಕರಿಸಿದವ ಪ್ರತಿ ವಾರದಲಿ ದಂಪತಿಗಳ ಅರ್ಚನೆ ತಾ ರಚಿಸಿದವ
ಸತ್ಯ ಸಂಶಯವು ಇಲ್ಲವೆಂದೆಂದು||4||
ಚತುರ ವಿಂಶತಿ ತತ್ತ್ವಗಳು ತತ್ಪತಿಗಳು ಎನಿಸುವ
ಬ್ರಹ್ಮ ಮುಖ ದೇವತೆಗಳು ಅನುದಿನ ಪ್ರತಿ ಪ್ರತಿ ನಾಡಿಗಳೊಳು ಇರುತಿದ್ದು
ಚತುರ ದಶ ಲೋಕದೊಳು ಜೀವ ಪ್ರತತಿಗಳ ಸಂರಕ್ಷಿಸುವ
ಶಾಶ್ವತನ ತತ್ತತ್ ಸ್ಥಾನದಲಿ ನೋಡುತಲೇ ಮೋದಿಪರು||5||
ಸತ್ಯ ಸಂಕಲ್ಪನು ಸದಾ ಎಪ್ಪತ್ತೆರೆಡು ಸಹಸ್ರದೊಳು
ಮೂವತ್ತು ನಾಲ್ಕು ಲಕ್ಷದ ಐವತ್ತಾರು ಸಹಸ್ರ
ಚಿತ್ಪ್ರಕ್ರುತಿಯ ಒಡಗೂಡಿ ಪರಮನು ನಿತ್ಯ ಮಂಗಳಮೂರ್ತಿ
ಭಕ್ತರ ತೆತ್ತಿಗನು ತಾನಾಗಿ ಸರ್ವತ್ರದಲಿ ಸಂತೈಪ||6||
ಮಣಿಗಳೊಳಗಿಹ ಸೂತ್ರದಂದದಿ ಪ್ರಣವ ಪಾದ್ಯನು
ಸರ್ವ ಚೇತನ ಗಣದೊಳಿದ್ದು ಅನವರತ ಸಂತೈಸುವನು ತನ್ನವರ
ಪ್ರಣತ ಕಾಮದ ಭಕ್ತ ಚಿಂತಾಮಣಿ ಚಿದಾನಂದೈಕ ದೇಹನು
ಅಣು ಮಹದ್ಗತನು ಅಲ್ಪರೋಪಾದಿಯಲಿ ನೆಲೆಸಿಪ್ಪ||7||
ಈ ಸುಷುಮ್ನ ಆದಿ ಅಖಿಳ ನಾಡೀ ಕೋಶ ನಾಭೀ ಮೂಲದಲಿ
ವೃಷಣಾ ಸದನ ಮಧ್ಯದಲಿಪ್ಪದು ತುಂದಿ ನಾಮದಲಿ
ಆ ಸರೋಜಾಸನ ಮುಖರು ಮೂಲೇಶನ ಅನಂದಾದಿ ಸುಗುಣ ಉಪಾಸನೆಯ ಗೈವುತಲಿ
ದೇಹದೊಳಗೆ ಇರುತಿಹರು||8||
ಸೂರಿಗಳು ಚಿತ್ತೈಸುವುದು ಭಾಗೀರಥಿಯೆ ಮೊದಲಾದ ತೀರ್ಥಗಳು
ಏರಧಿಕ ಎಪ್ಪತ್ತು ಸಾವಿರ ನಾಡಿಗಳೊಳಿಹವು
ಈ ರಹಸ್ಯವನು ಅಲ್ಪ ಜನರಿಗೆ ತೋರಿ ಪೇಳದೆ
ನಾಡಿ ನದಿಯೊಳು ಧೀರರು ಅನುದಿನ ಮಜ್ಜನವ ಮಾಡುತಲೇ ಸುಖಿಸುವರು||9||
ತಿಳಿವುದು ಈ ದೇಹದೊಳಗಿಹ ಎಡ ಬಲದ ನಾಡಿಗಳೊಳಗೆ ದಿವಿಜರು
ಜಲಜ ಸಂಭವ ವಾಯು ವಾಣಿ ಆದಿಗಳು ಬಲದಲ್ಲಿ
ಎಲರುಣಿಗ ವಿಹಗ ಇಂದ್ರ ಚಳಿವೆಟ್ಟಳಿಯ ಷಣ್ಮಹಿಶಿಯರು
ವಾರುಣಿ ಕುಲಿಶ ಧರ ಕಾಮಾದಿಗಳು ಎಡ ಭಾಗದೊಳಿಹರು||10||
ಇಕ್ಕಲದೊಳಿಹ ನಾಡಿಯೊಳು ದೇವರ್ಕಳಿಂದ ಒಡನಾಡುತಲಿ
ಪೊಂಬಕ್ಕಿ ದೇರನು ಜೀವರ ಅಧಿಕಾರಾನುಸಾರದಲಿ
ತಕ್ಕ ಸಾಧನವ ಮಾಡಿ ಮಾಡಿಸುತ ಅಕ್ಕರದಿ ಸಂತೈಪ ಭಕ್ತರ
ದಕ್ಕಗೊಡನು ಅಸುರರ್ಗೆ ಸತ್ಪುಣ್ಯಗಳನು ಅಪಹರಿಪ||11||
ತುಂದಿವಿಡಿದು ಆಶಿರದ ಪರಿಯಂತ ಒಂದು ವ್ಯಾಪಿಸಿಹುದು
ತಾವರ ಕಂದನಿಹನು ಅದರೊಳಗೆ ಅದಕೆ ಈರೈದು ಶಾಖೆಗಳು
ಒಂದಧಿಕ ದಶ ಕರಣದೊಳು ಸಂಬಂಧಗೈದಿಹವಲ್ಲಿ
ರವಿ ಶಶಿ ಸಿಂಧು ನಾಸತ್ಯಾದಿಗಳು ನೆಲೆಗೊಂಡಿಹರು ಸತತ||12||
ಪೊಕ್ಕಳದಿವಿಡಿದು ಒಂದೇ ನಾಡಿಯು ಸುಕ್ಕದಲೆ ಧಾರಾಳ ರೂಪದಿ
ಸಿಕ್ಕಿಹುದು ಈ ದೇಹದೊಳಗೆ ಸುಷುಮ್ನ ನಾಮದಲಿ
ರಕ್ಕಸರನು ಒಳ ಪೋಗಗೊಡದೆ ದಶ ದಿಕ್ಕಿನೊಳಗೆ ಸಮೀರ ದೇವನು
ಲೆಕ್ಕಿಸದೆ ಮತ್ತೊಬ್ಬರನು ಸಂಚರಿಪ ದೇಹದೊಳು||13||
ಇನಿತು ನಾಡೀ ಶಾಖೆಗಳು ತನುವಿನೊಳಗೆ ಇಹವೆಂದರಿದು ಏಕಾತ್ಮನು
ದ್ವಿ ಸಪ್ತತಿ ಸಾವಿರ ಆತ್ಮಕನು ಆಗಿ ನಾಡಿಯೊಳು
ವನಿತೆಯಿಂದ ಒಡಗೂಡಿ ನಾರಾಯಣ ದಿವಾ ರಾತ್ರಿಗಳಲಿ
ಈ ಪರಿ ವನಜಾಂಡದೊಳು ಅಖಿಳ ಜೀವರೊಳಿದ್ದು ಮೋಹಿಸುವ||14||
ದಿನದಿನದಿ ವರ್ಧಿಸುವ ಕುಮುದಾಪ್ತನ ಮಯೂಖದ ಸೊಬಗ
ಗತ ಲೋಚನ ವಿಲೋಕಿಸಿ ಮೋದ ಪಡಬಲ್ಲನೆ ನಿರಂತರದಿ
ಕುನರಗೆ ಈ ಸುಕಥ ಅಮೃತದ ಭೋಜನದ ಸುಖ ದೊರಕುವುದೇ
ಲಕ್ಷ್ಮೀ ಮನೋಹರನ ಸದ್ಗುಣವ ಕೀರ್ತಿಪ ಭಕುತಗೆ ಅಲ್ಲದಲೆ||15||
ಈ ತನುವಿನೊಳಗಿಹವು ಓತ ಪ್ರೋತ ರೂಪದಿ ನಾಡಿಗಳು
ಪುರುಹೂತ ಮುಖರು ಅಲ್ಲಿಹರು ತಮ್ಮಿಂದ ಅಧಿಕಾರ ಒಡಗೂಡಿ
ಭೀತಿಗೊಳಿಸುತ ದಾನವರ ಸಂಘಾತ ನಾಮಕ ಹರಿಯ ಗುಣ
ಸಂಪ್ರೀತಿಯಲಿ ಸದುಪಾಸನೆಯ ಗೈವುತಲೆ ಮೋದಿಪರು||16||
ಜಲಾಟ ಕುಕ್ಕಾಟ ಖಾಟ ಜೀವರ ಕಳೇವರಗಳೊಳು ಇದ್ದು ಕಾಣಿಸಿಕೊಳದೆ
ತತ್ತದ್ರೂಪ ನಾಮಗಳಿಂದ ಕರೆಸುತಲಿ
ಜಲರುಹೇಕ್ಷಣ ವಿವಿಧ ಕರ್ಮಗಳ ಅನುದಿನದಿ ಮಾಡಿ
ತತ್ತತ್ಫಲಗಳ ಉಣ್ಣದೆ ಸಂಚರಿಸುವನು ನಿತ್ಯ ಸುಖ ಪೂರ್ಣ||17||
ತಿಳಿದುಪಾಸನೆಗೈವುತ ಈಪರಿ ಮಲಿನನಂತಿರು ದುರ್ಜನರ ಕಂಗಳಿಗೆ ಗೋಚರಿಸದೆ
ವಿಪಶ್ಚಿತರ ಒಡವೆ ಗರ್ವಿಸದೆ
ಮಳೆ ಬಿಸಿಲು ಹಸಿ ತೃಷಿ ಜಯಾಜಯ ಖಳರ ನಿಂದ್ಯಾನಿಂದ್ಯ ಭಯಗಳಿಗೆ
ಅಳುಕದಲೆ ಮದ್ದಾನೆಯಂದದಿ ಚರಿಸು ಧರೆಯೊಳಗೆ||18||
ಕಾನನ ಗ್ರಾಮಸ್ಥ ಸರ್ವ ಪ್ರಾಣಿಗಳು ಪ್ರತಿ ದಿವಸದಲಿ
ಏನೇನು ಮಾಡುವ ಕರ್ಮಗಳು ಹರಿ ಪೂಜೆಯಂದರಿದು ದೇನಿಸುತ
ಸದ್ಭಕ್ತಿಯಲಿ ಪವಮಾನವಂದಿತ ದೇವಾಂತರಾತ್ಮಕ
ಶ್ರೀನಿವಾಸನಿಗೆ ಅರ್ಪಿಸುತ ಮೋದಿಸುತ ನಲಿವುತಿರು||19||
ನೋಕನೀಯನು ಲೋಕದೊಳು ಶುನಿಸೂಕರಾದಿಗಳೊಳಗೆ ನೆಲೆಸಿದ್ದು
ಏಕಮೇವಾದ್ವಿತೀಯ ಬಹುರೂಪಾಹ್ವಯಗಳಿಂದ
ತಾ ಕರೆಸುತ ಒಳಗಿದ್ದು ತಿಳಿಸದೆ ಶ್ರೀ ಕಮಲಭವ ಮುಖ್ಯ ಸಕಲ
ದಿವೌಕಸಗಣ ಆರಾಧ್ಯ ಕೈಕೊಂಡು ಅನವರತ ಪೊರೆವ||20||
ಇನಿತು ಉಪಾಸನೆಗೈವುತಿಹ ಸಜ್ಜನರು ಸಂಸಾರದಲಿ ಪ್ರತಿಪ್ರತಿ ದಿನಗಳಲಿ
ಏನೇನು ಮಾಡುವುದು ಎಲ್ಲ ಹರಿಪೂಜೆ ಎನಿಸಿಕೊಂಬುದು ಸತ್ಯವು
ಈ ಮಾತಿನಲಿ ಸಂಶಯಪಡುವ ನರನು ಅಲ್ಪನು ಸುನಿಶ್ಚಯ
ಬಾಹ್ಯ ಕರ್ಮವ ಮಾಡಿ ಫಲವೇನು||21||
ಭೋಗ್ಯ ಭೋಕ್ಟ್ರುಗ ಳೊಳಗೆ ಹರಿ ತಾ ಭೋಗ್ಯ ಭೋಕ್ತನು ಎನಿಸಿ
ಯೋಗ್ಯಾಯೋಗ್ಯ ರಸಗಳ ದೇವ ದಾನವ ಗಣಕೆ ಉಣಿಸುವನು
ಭಾಗ್ಯನಿಧಿ ಭಕ್ತರಿಗೆ ಸದ್ವೈರಾಗ್ಯ ಭಕ್ತಿ ಜ್ಞಾನವೀವ
ಅಯೋಗ್ಯರಿಗೆ ದ್ವೇಷಾದಿಗಳ ತನ್ನಲ್ಲಿ ಕೊಡುತಿಪ್ಪ||22||
ಈ ಚತುರ್ದಶ ಭುವನದೊಳಗೆ ಚರಾಚರಾತ್ಮಕ ಜೀವರಲ್ಲಿ
ವಿರೋಚನಾತ್ಮಜ ವಂಚಕನು ನೆಲೆಸಿದ್ದು ದಿನದಿನದಿ
ಯಾಚಕನುಯೆಂದೆನಿಸಿಕೊಂಬ ಮರೀಚಿರ್ದಮನ ಸುಹಂಸ ರೂಪ
ನಿಷೇಚಕ ಆಹ್ವಯನು ಆಗಿ ಜನರಭಿಲಾಷೆ ಪೂರೈಪ||23||
ಅನ್ನದನ್ನಾದನ್ನಮಯ ಸ್ವಯಂ ಅನ್ನ ಬ್ರಹ್ಮಾದಿ ಅಖಿಳ ಚೇತನಕೆ
ಅನ್ನ ಕಲ್ಪಕನಾಹನು ಅನಿರುದ್ಧಾದಿ ರೂಪದಲಿ
ಅನ್ಯರನು ಅಪೇಕ್ಷಿಸದೆ ಗುಣ ಕಾರುಣ್ಯ ಸಾಗರ ಸೃಷ್ಟಿಸುವನು
ಹಿರಣ್ಯ ಗರ್ಭನೊಳಿದ್ದು ಪಾಲಿಸುವನು ಜಗತ್ರಯವ||24||
ತ್ರಿಪದ ತ್ರಿದಶಾಧ್ಯಕ್ಷ ತ್ರಿಸ್ಥ ತ್ರಿಪಥಗಾಮಿನಿ ಪಿತ ತ್ರಿವಿಕ್ರಮ
ಕೃಪಣ ವತ್ಸಲ ಕುವಲಯ ದಳ ಶ್ಯಾಮ ನಿಸ್ಸೀಮ
ಅಪರಿಮಿತ ಚಿತ್ಸುಖ ಗುಣಾತ್ಮಕ ವಪುಷ ವೈಕುಂಠ ಆದಿ ಲೋಕಾಧಿಪ
ತ್ರಯೀಮಯ ತನ್ನವರ ನಿಷ್ಕಪಟದಿಂ ಪೊರೆವ||25||
ಲವಣ ಮಿಶ್ರಿತ ಜಲವು ತೋರ್ಪದು ಲವಣದೋಪಾದಿಯಲಿ ಜಿಹ್ವೆಗೆ
ವಿವರಗೈಸಲು ಶಕ್ಯವಾಗುವದೇನೋ ನೋಳ್ಪರಿಗೆ
ಸ್ವವಶ ವ್ಯಾಪಿಯೆನಿಸಿ ಲಕ್ಷ್ಮೀಧವ ಚರಾಚರದೊಳಗೆ ತುಂಬಿಹನು
ಅವಿದಿತನ ಸಾಕಲ್ಯ ಬಲ್ಲವರು ಆರು ಸುರರೊಳಗೆ||26||
ವ್ಯಾಪ್ಯನಂದದಿ ಸರ್ವಜೀವರೊಳಿಪ್ಪ ಚಿನ್ಮಯ ಘೋರ ಭವ
ಸಂತಪ್ಯ ಮಾನರು ಭಜಿಸೆ ಭಕುತಿಯಳಿಂದಲಿ ಇಹಪರದಿ ಪ್ರಾಪ್ಯನಾಗುವನು
ಅವರವಗುಣಗಳ ಒಪ್ಪುಗೊಂಬನು ಭಕ್ತವತ್ಸಲ ತಪ್ಪಿಸುವ
ಜನ್ಮಾದಿ ದೋಷಗಳ ಅವರಿಗೆ ಅನವರತ||27||
ಹಲವು ಬಗೆಯಲಿ ಹರಿಯ ಮನದಲಿ ಒಲಿಸಿ ನಿಲ್ಲಿಸಿ
ಏನು ಮಾಡುವ ಕೆಲಸಗಳು ಅವನಂಘ್ರಿ ಪೂಜೆಗಳು ಎಂದು ನೆನೆವುತಿರು
ಹಲಧರನುಜ ತಾನೇ ಸರ್ವ ಸ್ಥಳಗಳಲಿ ನೆಲೆಸಿದ್ದು
ನಿಶ್ಚಂಚಲ ಭಕುತಿ ಸುಜ್ಞಾನ ಭಾಗ್ಯವ ಕೊಟ್ಟು ಸಂತೈಪ||28||
ದೋಷ ಗಂಧ ವಿದೂರ ನಾನಾ ವೇಷ ಧಾರಕ ಈ ಜಗತ್ರಯ ಪೋಷಕ
ಪುರಾತನ ಪುರುಷ ಪುರುಹೂತ ಮುಖ ವಿನುತ
ಶೇಷವರ ಪರಿಯಂಕ ಶಯನ ವಿಭೀಷಣ ಪ್ರಿಯ ವಿಜಯ ಸಖ
ಸಂತೋಷಬಡಿಸುವ ಜನರಿಗೆ ಇಷ್ಟಾರ್ಥಗಳ ಪೂರೈಸಿ||29||
ಶ್ರೀ ಮಹೀ ಸೇವಿತ ಪದಾಂಬುಜ ಭೂಮ ಸದ್ಭಕ್ತಿ ಐಕ ಲಭ್ಯ
ಪಿತಾಮಹಾದಿ ಅಮರಾಸುರ ಪಾದ ಪಂಕಜ
ವಾಮ ವಾಮನ ರಾಮ ಸಂಸಾರಮಯ ಔಷಧ ಹೇ ಮಮ ಕುಲಸ್ವಾಮಿ
ಸಂತೈಸೆನಲು ಬಂದೊದಗುವನು ಕರುಣಾಳು||30||
ದುನುಜ ದಿವಿಜರೊಳಿದ್ದು ಅವರವರ ಅನುಸರಿಸಿ ಕರ್ಮಗಳ ಮಾಳ್ಪನು
ಜನನ ಮರಣಾದಿ ಅಖಿಳ ದೋಷ ವಿದೂರ
ಎಮ್ಮೊಡನೆ ಜನಿಸುವನು ಜೀವಿಸುವ ಸಂರಕ್ಷಣೆಯ ಮಾಡುವ ಎಲ್ಲ ಕಾಲದಿ
ಧನವ ಕಾಯ್ದಿಹ ಸರ್ಪನಂತೆ ಅನಿಮಿತ್ತ ಬಾಂಧವನು||31||
ಬಿಸರುಹ ಆಪ್ತ ಆಗಸದಿ ತಾನು ಉದಯಿಸಲು ವೃಕ್ಷಂಗಳ ನೆಳಲು ಪಸರಿಸುವವು
ಇಳೆಯೊಳು ಅಸ್ತಮಿಸಲಲ್ಲ ಅಲ್ಲೇ ಲೀನಹವು
ಶ್ವಸನ ಮುಖ್ಯ ಅಮರಾಂತರಾತ್ಮಕನ ಒಷದೊಳು ಇರುತಿಪ್ಪವು
ಈ ಜಗತ್ರಯ ಬಸಿರೊಳು ಇಂಬಿಟ್ಟು ಎಲ್ಲ ಕರ್ಮವ ತೋರ್ಪ ನೋಳ್ಪರಿಗೆ||32||
ತ್ರಿಭುವನ ಐಕ ಆರಾಧ್ಯ ಲಕ್ಷ್ಮೀ ಸುಭುಜ ಯುಗಳ ಆಲಂಗಿತಾಂಗ
ಸ್ವಭು ಸುಖಾತ್ಮ ಸುವರ್ಣವರ್ಣ ಸುಪರ್ಣ ವರವಾಹನ
ಅಭಯದ ಅನಂತಾರ್ಕ ಶಶಿ ಸನ್ನಿಭ ನಿರಂಜನ ನಿತ್ಯದಲಿ ತನಗೆ
ಅಭಿನಮಿಸುವರಿಗೆ ಏವ ಸರ್ವಾರ್ಥಗಳ ತಡೆಯದಲೆ||33||
ಕವಿಗಳಿಂದಲಿ ತಿಳಿದು ಪ್ರಾತಃ ಸವನ ಮಧ್ಯಂ ದಿನವು
ಸಾಯಮ ಸವನಗಳ ವಸು ರುದ್ರರು ಆದಿತ್ಯರೊಳು ರಾಜಿಸುವ
ಪವನನೊಳು ಕೃತಿ ಜಯ ಸುಮಾಯಾಧವನ ಮೂರ್ತಿತ್ರಯವ ಚಿಂತಿಸಿ
ದಿವಸವೆಂಬ ಆಹುತಿಗಳಿಂದ ಅರ್ಚಿಸುತ ಸುಖಿಸುತಿರು||34||
ಚತುರ ವಿಂಶತಿ ಅಬ್ಧ ವಸು ದೇವತೆಗಳೊಳು ಪ್ರದ್ಯುಮ್ನನು ಇಪ್ಪನು
ಚತುರ ಚತ್ವಾರಿಂಶತಿಗಳಲಿ ಸಂಕರುಷಣಾಖ್ಯ
ಹುತವಹ ಅಕ್ಷನೊಳಿಹನು ಮಾಯಪತಿಯು ಹದಿನಾರಧಿಕ
ದ್ವಾತ್ರಿಂಶತಿ ವರುಷಗಳಲಿಪ್ಪನು ಆದಿತ್ಯನೊಳು ಸಿತಕಾಯ||35||
ಷೋಡಶ ಉತ್ತರ ಶತ ವರುಷದಲಿ ಷೋಡಶ ಉತ್ತರ ಶತ ಸುರೂಪದಿ
ಕ್ರೀಡಿಸುವ ವಸು ರುದ್ರರು ಆದಿತ್ಯರೊಳು ಸತಿಸಹಿತ
ವ್ರೀಡವಿಲ್ಲದೆ ಭಜಿಪ ಭಕ್ತರ ಪೀಡಿಸುತ ದುರಿತ ಔಘಗಳ
ದೂರ ಓಡಿಸುತ ಬಳಿಯಲಿ ಬಿಡದೆ ನೆಲೆಸಿಪ್ಪ ಭಯಹಾರಿ||36||
ಮೂರಧಿಕ ಎಂಭತ್ತು ಸಹಸ್ರ ಐನೂರಿಪ್ಪತ್ತು ಎನಿಪ ರೂಪದಿ
ತೋರುತಿಪ್ಪ ದಿವಾ ನಿಶಾಧಿಪರೊಳಗೆ ನಿತ್ಯದಲಿ
ಭಾರತೀ ಪ್ರಾಣರೊಳಗಿದ್ದು ನಿವಾರಿಸುತ ಭಕ್ತರ ದುರಿತ
ಹಿಂಕಾರ ನಿಧನ ಪ್ರಥಮ ರೂಪದಿ ಪಿತೃಗಳನೆ ಪೊರೆವ||37||
ಬುದ್ಧಿ ಪೂರ್ವಕ ಉತ್ತಮೋತ್ತಮ ಶುದ್ಧ ಊರ್ಣ ಅಂಬರವ
ಪಂಕದೊಳು ಅಡ್ಡಿ ತೆಗೆಯಲು ಲೇಪವಾಗುವದೇ ಪರೀಕ್ಷಿಸಲು
ಪದ್ಮನಾಭನು ಸರ್ವಜೀವರೊಳಿದ್ದರೇನು
ಗುಣತ್ರಯಗಳಿಂ ಬದ್ಧನು ಆಗುವನೇನೋ? ನಿತ್ಯ ಸುಖಾತ್ಮ ಚಿನ್ಮಯನು||38||
ಸಕಲ ದೋಷ ವಿದೂರ ಶಶಿ ಪಾವಕ ಸಹಸ್ರ ಅನಂತ ಸೂರ್ಯ ಪ್ರಕಾರ ಸನ್ನಿಭ ಗಾತ್ರ
ಲಕುಮಿ ಕಳತ್ರ ಸುರಮಿತ್ರ
ವಿಖನ ಸಾಂಡದೊಳಿಪ್ಪ ಬ್ರಹ್ಮಾದಿ ಅಖಿಳ ಚೇತನ ಗಣಕೆ
ತಾನೇ ಸಖನು ಎನಿಸಿಕೊಂಡು ಅಕುಟಿಲ ಆತ್ಮಕನು ಇಪ್ಪನು ಅವರಂತೆ||39||
ದೇಶ ಭೇದಗಳಲ್ಲಿ ಇಪ್ಪ ಆಕಾಶದೋಪಾದಿಯಲಿ ಚೇತನ ರಾಶಿಯೊಳು ನೆಲೆಸಿಪ್ಪನು
ಅವ್ಯವಧಾನದಲಿ ನಿರುತ
ಶ್ರೀ ಸಹಿತ ಸರ್ವತ್ರದಿ ನಿರವಾಕಾಶ ಕೊಡುವಂದದಲಿ ಕೊಡುತ
ನಿರಾಶೆಯಲಿ ಸರ್ವಾಂತರಾತ್ಮಕ ಶೋಭಿಸುವ ಸುಖದ||40||
ಶ್ರೀ ವಿರಿಂಚಿ ಆದಿ ಅಮರಗಣ ಸಂಸೇವಿತ ಅಂಘ್ರಿ ಸರೋಜ
ಈ ಜಡ ಜೀವ ರಾಶಿಗಳ ಒಳ ಹೊರಗೆ ನೆಲೆಸಿದ್ದು ನಿತ್ಯದಲಿ
ಸಾವಕಾಶನು ಎನಿಸಿ ತನ್ನ ಕಳೇವರದೊಳು ಇಂಬಿಟ್ಟು ಸಲಹುವ
ದೇವ ದೇವಕೀ ರಮಣ ದಾನವ ಹರಣ ಜಿತಾಮರಣ||41||
ಮಾಸ ಒಂದಕೆ ಪ್ರತಿ ದಿವಸದಲಿ ಶ್ವಾಸಗಳು ಅಹವು
ಅಷ್ಟ ಚತ್ವಾರಿಂಶತಿ ಸಹಸ್ರಾಧಿಕ ಆರು ಸುಲಕ್ಷ ಸಂಖ್ಯೆಯಲಿ
ಹಂಸನಾಮಕ ಹರಿಯ ಷೋಡಶ ಈ ಶತಾಬ್ದದಿ ಭಜಿಸೆ ಒಲಿವ
ದಯಾಸಮುದ್ರ ಕುಚೇಲಗೆ ಒಲಿದಂದದಲಿ ದಿನದಿನದಿ||42||
ಸ್ಥೂಲ ದೇಹದೊಳಿದ್ದು ವರುಷಕೆ ಏಳಧಿಕ ಎಪ್ಪತ್ತು ಲಕ್ಷದ
ಮೇಲೆ ಎಪ್ಪತ್ತಾರು ಸಾವಿರ ಶ್ವಾಸ ಜಪಗಳನು
ಗಾಳಿ ದೇವನು ಕರುಣದಲಿ ಈರೇಳು ಲೋಕದೊಳುಳ್ಳ
ಚೇತನ ಜಾಲದೊಳು ಮಾಡುವನು ತ್ರಿಜಗದ್ವ್ಯಾಪ್ತ ಪರಮಾಪ್ತ||43||
ಈರೆರೆಡು ದೇಹಗಳೊಳಗಿದ್ದು ಸಮೀರ ದೇವನು ಶ್ವಾಸ ಜಪ
ನಾನೂರು ಅಧಿಕವು ಆಗಿಪ್ಪ ಎಂಭತ್ತಾರು ಸಹಸ್ರ ತಾ ರಚಿಸುವನು ದಿವಸ ಒಂದಕೆ
ಮೂರು ವಿಧ ಜೀವರೊಳಗಿದ್ದು
ಖರಾರಿ ಕರುಣಾಬಲವು ಅದೆಂತುಟೊ ಪವನ ರಾಯನೊಳು||44||
ಶ್ರೀಧವ ಜಗನ್ನಾಥ ವಿಠಲ ತಾ ದಯದಿ ವದನದೊಳು ನುಡಿದ ಉಪಾದಿಯಲಿ
ನಾ ನುಡಿದೆನು ಅಲ್ಲದೆ ಕೇಳಿ ಬುಧ ಜನರು
ಸಾಧು ಲಿಂಗ ಪ್ರದರ್ಶಕರು ನಿಷೇಧಗೈಸಿದರೆ ಏನಹುದು
ಎನ್ನಪರಾಧವು ಏನಿದರೊಳಗೆ ಪೇಳ್ವುದು ತಿಳಿದು ಕೋವಿದರು||45||
*********
harikathAmRutasAra gurugaLa karuNadindApanitu kELuve
parama BagavadBaktaru idanAdaradi kELuvudu||
vAsudEvanu prANamuKa tatva ISarindali sEve kaikoLuta
I SarIradoLu ippa mUvattAru sAvira I sunADigaLoLage
I BUmI samEta vihAragaiva
para ISana amala sumUrtigaLa cintisuta higgutiru||1||
caraNagaLoLiha nADigaLu hannereDu sAvira madhya dEhadoLu irutihavu hadinAlku
bAhugaLoLage IrereDu SiradoLu Aru sahasra cintisi
iruLu hagalu aBimAni divijaranaritu
upAsanegaivaru iLeyoLu svarga vAsigaLu||2||
bRuhatinAmaka vAsudEvanu vahisi strI rUpa
dOSha virahita eppattereDu sAvira nADigaLoLagiddu
druhiNa modalAda amaragaNa sanmahima
sarva prANigaLa mahAmahima santaisuvanu santata parama karuNALu||3||
nUru varShake divasa mUvattAru sAvira vahavu
nADi SarIradoLage initihavu endaritu ondu divasadali
sUrigaLa satkarisidava prati vAradali daMpatigaLa arcane tA racisidava
satya saMSayavu illavendendu||4||
catura viMSati tattvagaLu tatpatigaLu enisuva
brahma muKa dEvategaLu anudina prati prati nADigaLoLu irutiddu
catura daSa lOkadoLu jIva pratatigaLa samrakShisuva
SASvatana tattat sthAnadali nODutalE mOdiparu||5||
satya sankalpanu sadA eppattereDu sahasradoLu
mUvattu nAlku lakShada aivattAru sahasra
citprakrutiya oDagUDi paramanu nitya mangaLamUrti
Baktara tettiganu tAnAgi sarvatradali santaipa||6||
maNigaLoLagiha sUtradandadi praNava pAdyanu
sarva cEtana gaNadoLiddu anavarata santaisuvanu tannavara
praNata kAmada Bakta cintAmaNi cidAnandaika dEhanu
aNu mahadgatanu alparOpAdiyali nelesippa||7||
I suShumna Adi aKiLa nADI kOSa nABI mUladali
vRuShaNA sadana madhyadalippadu tundi nAmadali
A sarOjAsana muKaru mUlESana anandAdi suguNa upAsaneya gaivutali
dEhadoLage irutiharu||8||
sUrigaLu cittaisuvudu BAgIrathiye modalAda tIrthagaLu
Eradhika eppattu sAvira nADigaLoLihavu
I rahasyavanu alpa janarige tOri pELade
nADi nadiyoLu dhIraru anudina majjanava mADutalE suKisuvaru||9||
tiLivudu I dEhadoLagiha eDa balada nADigaLoLage divijaru
jalaja saMBava vAyu vANi AdigaLu baladalli
elaruNiga vihaga indra caLiveTTaLiya ShaNmahiSiyaru
vAruNi kuliSa dhara kAmAdigaLu eDa BAgadoLiharu||10||
ikkaladoLiha nADiyoLu dEvarkaLiMda oDanADutali
poMbakki dEranu jIvara adhikArAnusAradali
takka sAdhanava mADi mADisuta akkaradi santaipa Baktara
dakkagoDanu asurarge satpuNyagaLanu apaharipa||11||
tundiviDidu ASirada pariyanta ondu vyApisihudu
tAvara kandanihanu adaroLage adake Iraidu SAKegaLu
ondadhika daSa karaNadoLu saMbandhagaidihavalli
ravi SaSi sindhu nAsatyAdigaLu nelegonDiharu satata||12||
pokkaLadiviDidu ondE nADiyu sukkadale dhArALa rUpadi
sikkihudu I dEhadoLage suShumna nAmadali
rakkasaranu oLa pOgagoDade daSa dikkinoLage samIra dEvanu
lekkisade mattobbaranu sancaripa dEhadoLu||13||
initu nADI SAKegaLu tanuvinoLage ihavendaridu EkAtmanu
dvi saptati sAvira Atmakanu Agi nADiyoLu
vaniteyinda oDagUDi nArAyaNa divA rAtrigaLali
I pari vanajAnDadoLu aKiLa jIvaroLiddu mOhisuva||14||
dinadinadi vardhisuva kumudAptana mayUKada sobaga
gata lOcana vilOkisi mOda paDaballane niraMtaradi
kunarage I sukatha amRutada BOjanada suKa dorakuvudE
lakShmI manOharana sadguNava kIrtipa Bakutage alladale||15||
I tanuvinoLagihavu Ota prOta rUpadi nADigaLu
puruhUta muKaru alliharu tamminda adhikAra oDagUDi
BItigoLisuta dAnavara sanGAta nAmaka hariya guNa
saMprItiyali sadupAsaneya gaivutale mOdiparu||16||
jalATa kukkATa KATa jIvara kaLEvaragaLoLu iddu kANisikoLade
tattadrUpa nAmagaLiMda karesutali
jalaruhEkShaNa vividha karmagaLa anudinadi mADi
tattatPalagaLa uNNade sancarisuvanu nitya suKa pUrNa||17||
tiLidupAsanegaivuta Ipari malinanantiru durjanara kangaLige gOcarisade
vipaScitara oDave garvisade
maLe bisilu hasi tRuShi jayAjaya KaLara nindyAnindya BayagaLige
aLukadale maddAneyandadi carisu dhareyoLage||18||
kAnana grAmastha sarva prANigaLu prati divasadali
EnEnu mADuva karmagaLu hari pUjeyandaridu dEnisuta
sadBaktiyali pavamAnavandita dEvAMtarAtmaka
SrInivAsanige arpisuta mOdisuta nalivutiru||19||
nOkanIyanu lOkadoLu SunisUkarAdigaLoLage nelesiddu
EkamEvAdvitIya bahurUpAhvayagaLinda
tA karesuta oLagiddu tiLisade SrI kamalaBava muKya sakala
divaukasagaNa ArAdhya kaikonDu anavarata poreva||20||
initu upAsanegaivutiha sajjanaru saMsAradali pratiprati dinagaLali
EnEnu mADuvudu ella haripUje enisikoMbudu satyavu
I mAtinali saMSayapaDuva naranu alpanu suniScaya
bAhya karmava mADi PalavEnu||21||
BOgya BOkTruga LoLage hari tA BOgya BOktanu enisi
yOgyAyOgya rasagaLa dEva dAnava gaNake uNisuvanu
BAgyanidhi Baktarige sadvairAgya Bakti j~jAnavIva
ayOgyarige dvEShAdigaLa tannalli koDutippa||22||
I caturdaSa BuvanadoLage carAcarAtmaka jIvaralli
virOcanAtmaja vancakanu nelesiddu dinadinadi
yAcakanuyendenisikoMba marIcirdamana suhaMsa rUpa
niShEcaka Ahvayanu Agi janaraBilAShe pUraipa||23||
annadannAdannamaya svayaM anna brahmAdi aKiLa cEtanake
anna kalpakanAhanu aniruddhAdi rUpadali
anyaranu apEkShisade guNa kAruNya sAgara sRuShTisuvanu
hiraNya garBanoLiddu pAlisuvanu jagatrayava||24||
tripada tridaSAdhyakSha tristha tripathagAmini pita trivikrama
kRupaNa vatsala kuvalaya daLa SyAma nissIma
aparimita citsuKa guNAtmaka vapuSha vaikunTha Adi lOkAdhipa
trayImaya tannavara niShkapaTadiM poreva||25||
lavaNa miSrita jalavu tOrpadu lavaNadOpAdiyali jihvege
vivaragaisalu SakyavAguvadEnO nOLparige
svavaSa vyApiyenisi lakShmIdhava carAcaradoLage tuMbihanu
aviditana sAkalya ballavaru Aru suraroLage||26||
vyApyanandadi sarvajIvaroLippa cinmaya GOra Bava
santapya mAnaru Bajise BakutiyaLindali ihaparadi prApyanAguvanu
avaravaguNagaLa oppugoMbanu Baktavatsala tappisuva
janmAdi dOShagaLa avarige anavarata||27||
halavu bageyali hariya manadali olisi nillisi
Enu mADuva kelasagaLu avananGri pUjegaLu endu nenevutiru
haladharanuja tAnE sarva sthaLagaLali nelesiddu
niScancala Bakuti suj~jAna BAgyava koTTu santaipa||28||
dOSha gandha vidUra nAnA vESha dhAraka I jagatraya pOShaka
purAtana puruSha puruhUta muKa vinuta
SEShavara pariyanka Sayana viBIShaNa priya vijaya saKa
santOShabaDisuva janarige iShTArthagaLa pUraisi||29||
SrI mahI sEvita padAMbuja BUma sadBakti aika laBya
pitAmahAdi amarAsura pAda pankaja
vAma vAmana rAma saMsAramaya auShadha hE mama kulasvAmi
santaisenalu bandodaguvanu karuNALu||30||
dunuja divijaroLiddu avaravara anusarisi karmagaLa mALpanu
janana maraNAdi aKiLa dOSha vidUra
emmoDane janisuvanu jIvisuva samrakShaNeya mADuva ella kAladi
dhanava kAydiha sarpanante animitta bAndhavanu||31||
bisaruha Apta Agasadi tAnu udayisalu vRukShangaLa neLalu pasarisuvavu
iLeyoLu astamisalalla allE lInahavu
Svasana muKya amarAntarAtmakana oShadoLu irutippavu
I jagatraya basiroLu iMbiTTu ella karmava tOrpa nOLparige||32||
triBuvana aika ArAdhya lakShmI suBuja yugaLa AlangitAnga
svaBu suKAtma suvarNavarNa suparNa varavAhana
aBayada anantArka SaSi sanniBa niranjana nityadali tanage
aBinamisuvarige Eva sarvArthagaLa taDeyadale||33||
kavigaLindali tiLidu prAtaH savana madhyaM dinavu
sAyama savanagaLa vasu rudraru AdityaroLu rAjisuva
pavananoLu kRuti jaya sumAyAdhavana mUrtitrayava cintisi
divasaveMba AhutigaLinda arcisuta suKisutiru||34||
catura viMSati abdha vasu dEvategaLoLu pradyumnanu ippanu
catura catvAriMSatigaLali sankaruShaNAKya
hutavaha akShanoLihanu mAyapatiyu hadinAradhika
dvAtriMSati varuShagaLalippanu AdityanoLu sitakAya||35||
ShODaSa uttara Sata varuShadali ShODaSa uttara Sata surUpadi
krIDisuva vasu rudraru AdityaroLu satisahita
vrIDavillade Bajipa Baktara pIDisuta durita auGagaLa
dUra ODisuta baLiyali biDade nelesippa BayahAri||36||
mUradhika eMBattu sahasra ainUrippattu enipa rUpadi
tOrutippa divA niSAdhiparoLage nityadali
BAratI prANaroLagiddu nivArisuta Baktara durita
hiMkAra nidhana prathama rUpadi pitRugaLane poreva||37||
buddhi pUrvaka uttamOttama Suddha UrNa aMbarava
pankadoLu aDDi tegeyalu lEpavAguvadE parIkShisalu
padmanABanu sarvajIvaroLiddarEnu
guNatrayagaLiM baddhanu AguvanEnO? nitya suKAtma cinmayanu||38||
sakala dOSha vidUra SaSi pAvaka sahasra ananta sUrya prakAra sanniBa gAtra
lakumi kaLatra suramitra
viKana sAnDadoLippa brahmAdi aKiLa cEtana gaNake
tAnE saKanu enisikonDu akuTila Atmakanu ippanu avarante||39||
dESa BEdagaLalli ippa AkASadOpAdiyali cEtana rASiyoLu nelesippanu
avyavadhAnadali niruta
SrI sahita sarvatradi niravAkASa koDuvandadali koDuta
nirASeyali sarvAntarAtmaka SOBisuva suKada||40||
SrI viriMci Adi amaragaNa saMsEvita anGri sarOja
I jaDa jIva rASigaLa oLa horage nelesiddu nityadali
sAvakASanu enisi tanna kaLEvaradoLu iMbiTTu salahuva
dEva dEvakI ramaNa dAnava haraNa jitAmaraNa||41||
mAsa ondake prati divasadali SvAsagaLu ahavu
aShTa catvAriMSati sahasrAdhika Aru sulakSha sanKyeyali
haMsanAmaka hariya ShODaSa I SatAbdadi Bajise oliva
dayAsamudra kucElage olidandadali dinadinadi||42||
sthUla dEhadoLiddu varuShake ELadhika eppattu lakShada
mEle eppattAru sAvira SvAsa japagaLanu
gALi dEvanu karuNadali IrELu lOkadoLuLLa
cEtana jAladoLu mADuvanu trijagadvyApta paramApta||43||
IrereDu dEhagaLoLagiddu samIra dEvanu SvAsa japa
nAnUru adhikavu Agippa eMBattAru sahasra tA racisuvanu divasa ondake
mUru vidha jIvaroLagiddu
KarAri karuNAbalavu adentuTo pavana rAyanoLu||44||
SrIdhava jagannAtha viThala tA dayadi vadanadoLu nuDida upAdiyali
nA nuDidenu allade kELi budha janaru
sAdhu linga pradarSakaru niShEdhagaisidare Enahudu
ennaparAdhavu EnidaroLage pELvudu tiLidu kOvidaru||45||