RAO COLLECTIONS SONGS refer remember refresh render DEVARANAMA
ಸುಗ್ಗಿ ಮಾಡುವ ಬನ್ನಿ ಸುಜ್ಞಾನದ ಪ
ಬೆಳೆದ ಘನಸುಖ ಬೇಕಾದ್ಹಾಂಗೆ ತಿಳಿದವರುಂಡುಟ್ಟು ದೇಗುವ್ಹಾಂಗೆ 1
ಬಯಸುವ ಬಯಕಿಗೆ ಉಂಟಾಗ್ಯದೆ ಶ್ರೇಯಸುಖ ರಾಶಿರಾಶಿಯು ಒಟ್ಟೈದೆ 2
ಸಾರುತ ಶ್ರುತಿ ಸವಿಪೊಗಳುತಲ್ಯದೆ ಬೀರುತ ಜನಮಯ ಸಾರಿ ಚೆಲ್ಯದೆ 4
ದೀನ ಮಹಿಪತಿಗಾನಂದವ್ಯಾಗದೆಮನದಿರಗಿ ಉನ್ಮನವಾಗ್ಯನೆ 5
***