" ಶ್ರೀ ರಾಘವೇಂದ್ರ ಸ್ತುತಿ "
ರಚನೆ: ಆಚಾರ್ಯ ನಾಗರಾಜು ಹಾವೇರಿ
ಮುದ್ರಿಕೆ : ವೇಂಕಟನಾಥ
ರಾಗ : ಹಂಸಾನಂದೀ ತಾಳ : ಆದಿ
ಕರುಣಾಕರ ಶ್ರೀ ರಾಘವೇಂದ್ರಾ ।
ಕರುಣಾನಿಧಿ ಶ್ರೀ ಹರಿ -
ಸನ್ನಿಧಾನಪಾತ್ರಾ ।। ಪಲ್ಲವಿ ।।
ಭಜಕ ಜನ ಮಂದಾರ ಗುರುರಾಜಾ । ಜ ।
ಡಜಲೋಚನ ನರಹರಿಯ ಏಕಾಂತದಿ ।
ಭಜಿಪ ದೇಶಿಕವರ್ಯ ।। ಚರಣ ।।
ಯತಿಕುಲ ತಿಲಕ ಮಂಚಾಲೆ ಪುರ ವಾಸಾ ।
ಸಂತತ ಸಲಹಾ ಖಗರಾಜ -
ಗಮನ ಪ್ರೇಷ್ಠಾ ।। ಚರಣ ।।
ಕಾಮಿತ ಫಲವೀವ ಸುರ ಕಾಮಧೇನು ।
ಕಾಮಿತದಾತೆ ಸುತ ಶ್ರೀ ಶಂಖುಕರ್ಣಾ ।। ಚರಣ ।।
ಕೃತದಿ ಪ್ರಹ್ಲಾದರಾಯನಾಗಿ ।
ಕ್ರತು ಮಾಡ್ದ ಸ್ಥಳದಿ -
ಸ್ಥಿರವಾಗಿ ನಿಂತ ।। ಚರಣ ।।
ವೇದ ಮತಾಬ್ಧಿಗೆ ಪೂರ್ಣೇ೦ದುನೆನಿಸಿ ।
ಮಧ್ವ ಪಿತ ವೇಂಕಟನಾಥ ಮೂಲರಾಮ ।
ಪದಾರ್ಚಕ ಸುಬುಧೇಂದ್ರ ಪ್ರಿಯ ।। ಚರಣ ।।
****