..
ಗುರುರಾಯ ನೀನೆ ಧ್ವರೀ ! ಧ್ವರೀ ! ಪ
ಪರಮ ಭಾಗವತರ ನೀ ಮರೆಯದೆ ಪೊರೆವಂಥ ಅ.ಪ
ಪರಮ ಭಕ್ತರು ನಿನ್ನ ಕರೆಯಲಾಕ್ಷಣ ಬಂದು
ಪರಿಪರಿ ಸುಖಗಳ ಮರೆಯದೆ ಕೊಡುವಂಥ 1
ಶರಣ ಜನರಪ - ಮರಣ ಕಳೆದು ಸ್ಥೂಲ
ಹರಣರಕ್ಷಿಸಿ ಸುಖ - ಅರಣದಲ್ಲಿಡುವಂಥ 2
ಅನ್ಯರಿಗಳವಡದ - ಘನ್ನ ಮಹಿಮನೆ ನಿನ್ನ
ಮನ್ನದಿ ಭಜಿಪ ಜನರ - ಚನ್ನವಾಗಿ ಪೊರೆವಂಥ 3
ರಾಜ ಚೋರ ವ್ಯಾಘ್ರ - ರಾಜ ವೃಶ್ಚಿಕ ಸರ್ಪ
ರಾಜಿ ನಕÀ್ರದ ಭಯ - ಮಾಜಿಸಿ ಪೊರೆವೊನಿಂಥಾ 4
ಭೂತಳದೊಳಗತಿ - ಖ್ಯಾತನಾಗಿ ಸದಾ
ದಾತ ಗುರು ಜಗನ್ನಾಥ ವಿಠಲ ನೊಲಿಸಿದಂಥ 5
***