..
ಮನವೇ ಇದೆ ಮರೆಯಾದೆನಮ್ಮಮನಸಿಜನಯ್ಯನ ನೆನೆಸಾದೆ ಹೋದೆ ಪ
ವೈಷ್ಣವ ಜನ್ಮವೆ ಬಯಸು ಏಕೋವಿಷ್ಣು ಸದಯದಿ ಷಡ್‍ವರ್ಗವ ಜಯಿಸು ||ಜಿಷ್ಣು ಸಖನ ದಾಸ್ಯ ವಹಿಸು ನೀನೆಶ್ರೇಷ್ಠನೆನ್ನದಲೇ ಶೀತೋಷ್ಣವ ಸಹಿಸು 1
ನವ ವಿಧ ಭಕುತಿಯ ಮಾಡು ಪದ್ಮಭವಾದ್ಯರು ಶ್ರೀಹರಿಗೆ ಎಲ್ಲಿ ಈಡು ||ಪವನಾ ಮತಕೆ ಉಂಟೇ ಜೋಡು ಮಾ-ಧವನ ಮೂರ್ತಿಯ ಮನದಣಿಯ ನೀ ನೋಡು 2
ಈಷಣ ತ್ರಯ ನಿರಾಕರಿಸು ಬಲುಭೂಷಣ ಬರುವದು ಕುಲವನುದ್ಧರಿಸು ||ದೋಷರಾಶಿಗಳ ಸಂಹರಿಸು ಶ್ರೀನಿ-ವಾಸ ಮೋಹನ ವಿಠಲನ ಅಂಘ್ರಿ ಭಜಿಸು 3
***