Showing posts with label ನೋಡೆಲೆ ಮನವೆ ಕೊಂಡಾಡು ಗುರುಗಳ ಪಾದ gurushreesha vittala NODELE MANAVE KONDAADU GURUGALA PAADA. Show all posts
Showing posts with label ನೋಡೆಲೆ ಮನವೆ ಕೊಂಡಾಡು ಗುರುಗಳ ಪಾದ gurushreesha vittala NODELE MANAVE KONDAADU GURUGALA PAADA. Show all posts

Tuesday 5 October 2021

ನೋಡೆಲೆ ಮನವೆ ಕೊಂಡಾಡು ಗುರುಗಳ ಪಾದ ankita gurushreesha vittala NODELE MANAVE KONDAADU GURUGALA PAADA



ನೋಡೆಲೆ ಮನವೆ ಕೊಂಡಾಡು ಗುರುಗಳ ಪಾದ-
ಈಡು ಇಲ್ಲವೊ ಪುಣ್ಯಕೆ            || ಪ ||

ನಾಡೊಳಗೆ ಗುರುರಾಘವೇಂದ್ರ ರಾಯರ ಸೇವೆ-
ಮಾಡಿದವ ಪರಮ ಧನ್ಯ – ಮಾನ್ಯ        || ಅ ||

ನಿಷ್ಠೆಯಿಂದಲಿ ಸ್ಮರಿಸೆ ಕಷ್ಟಗಳು ದೂರ ಮನೋ-ಭೀಷ್ಟಗಳ ಪೂರೈಪರೋ
ಅಷ್ಟಸೌಭಾಗ್ಯವನೆ ಕೊಟ್ಟು ಸುಜನರಿಗೆ ಶ್ರೀ-ವಿಷ್ಣುದಾಸ್ಯವ ತೋರ್ಪರೋ
ದೃಷ್ಟಿಯಿಂದಲಿ ನೋಡಲನೇಕ ಜನ್ಮದ ಪಾಪ-ಬಿಟ್ಟು ಪೋಪವೊ ಕ್ಷಣದಲಿ
ಎಷ್ಟು ಹೇಳಲಿ ಇವರ ನಿಷ್ಠ ಮಹಾತ್ಮ್ಯೆಯನು-ದುಷ್ಟರಿಗೆ ದೊರೆಯದಿವರ ಸೇವಾ            || ೧ ||

ಹಲವು ಕ್ಷೇತ್ರಗಳೇಕೆ ಹಲವು ತೀರ್ಥಗಳೇಕೆ-ಫಲ ಸುಲಭದಲ್ಲಿರಲು
ಬಲವು ಇದ್ದದ್ದರೊಳು ಪ್ರದಕ್ಷಿಣೆ ಸುಪದಜಲ-ತಲೆಯಲ್ಲಿ ಧರಿಸಿ ನಿತ್ಯ
ಮಲರಹಿತನು ಆಗಿ ದಂಡಪ್ರಣಾಮವ ಮಾಡೆ-ಒಲಿವರು ಕರುಣದಲಿ ಬೇಗ
ಜಲಜನಾಭನು ನಾಲ್ಕುರೂಪದಿಂದಿವರಲ್ಲಿ-ಸಿಲುಕಿ ಪೂಜೆಯಗೊಂಬ ಸತತ – ಮೋಕ್ಷದಾತಾ    || ೨ ||

ಹರಿದಾಸರಿದ್ದ ಸ್ಥಳ ವರಕಾಶಿ ಮೊದಲಾದ-ಕುರುಕ್ಷೇತ್ರಕಿಂತಧಿಕವೋ
ಸುರ ಋಷಿ ಮುನಿಗಳು ಇಲ್ಲಿಹರು ವೈಕುಂಠ-ಸರಿಮಿಗಿಲು ಎಂದೆನಿಪುದೋ
ಪರಮ ಸುಜ್ಞಾನಿಗಳಿಗೀ ಫಲವು ದೊರಕುವುದು-ತರತಮದಿ ಇತರ ಜನಕೆ
ಗುರುಶ್ರೀಶವಿಠ್ಠಲನು ಇವರ ರೂಪನಾಮದಲಿ-ಪರಿಪರಿಯ ವರವಗರೆವಾ – ಪೊರೆವಾ        || ೩ ||
******