Showing posts with label ಮಾಧವನ ನೋಡಿ ಸಂಪಾದಿಸಿದೆ ಭಕುತಿಯನು vijaya vittala. Show all posts
Showing posts with label ಮಾಧವನ ನೋಡಿ ಸಂಪಾದಿಸಿದೆ ಭಕುತಿಯನು vijaya vittala. Show all posts

Wednesday, 16 October 2019

ಮಾಧವನ ನೋಡಿ ಸಂಪಾದಿಸಿದೆ ಭಕುತಿಯನು ankita vijaya vittala

ವಿಜಯದಾಸ
ಮಾಧವನ ನೋಡಿ ಸಂಪಾದಿಸಿದೆ ಭಕುತಿಯನು |
ಆದರಪೂರ್ವಕದಿಂದಲಿ ಮಾಧುರ್ಯವಾದ ಮನ |
ಮತವಿಡಿದು ಪ

ಕರಿ ಮೊರೆ ಇಡಲು ಕೇಳುತ ನಕ್ರನ |
ಕಡಿದು ಕರುಣದಿಂದಲಿ ತಡಿಯದಲೆ ಜಡುಮತಿಯ |
ಕಡು ಮೆಚ್ಚಿ ಬಂದವನ 1

ಮರಣಕಾಲದಿ ಭಯಂಕರವಾದ ಯಮನ ದೂ |
ತರನ ನೋಡಿ ಕರಿಯಲು |
ಶರಧಿ ಮಧ್ಯದಲ್ಲಿ |
ಮೆರೆವ ಮಧುಸೂದನನ 2

ಜ್ಞಾನ ಪಾಪಿಯ ಸ್ನಾನ ಆನಂದದಲಿ ಮಾಡಿ |
ಹೀನ ದೋಷಗಳ ಕಳೆದು |
ಜ್ಞಾನವಧಿಕವಾದ ಗುರುಗಳ ಕೃಪೆಯಿಂದ |
ಶ್ರೀ ವಿಜಯವಿಠ್ಠಲ ಸೇತುವಾಸನಾ 3
*********