ankita ಲಕುಮೀಶ
ರಾಗ: [ರೇವಗುಪ್ತಿ] ತಾಳ: [ಆದಿ]
ಮಂದನ ಮೊರೆಗೆ ಮಂತ್ರಮಂದಿರ ಶ್ರೀ ರಾಘ-
ವೇಂದ್ರ ನೀ ಓಡ್ಯೋಡಿ ಬಂದು ರಕ್ಷಿಸಯ್ಯಾ ಪ
ಹಿಂದೆ ತಂದೆಯ ನಾನಾ ಅಪರಾಧ ಒಂದೂ ಎಣಿಸದೆ ಮೋಕ್ಷಕೊಡಿಸಿದೆ
ಎಂದು ಕೇಳಿದೆ ದೀನಜನಬಂಧುವೆಂದು ನಂಬಿ ವಂದಿಪೆ ಅ ಪ
ಮಲಿನಜನರ ಸೇರಿ ಕೆಟ್ಟೆ ವರ್ಣಾಶ್ರಮ ಧರ್ಮ ತಿಳಿದಾಚರಿಸದೆ ಬಿಟ್ಟೆ
ಹಲವು ನಾನಾ ಬಗೆಯ ರೋಗದ ಸುಳಿಯ ಶೂಲದ ಬಲೆಗೆ ಒಳಗಾದೆ
ಇಳಿಯೊಳಿನ್ನ ಕರುಣಿಗಳ ಕಾಣೆ ಛಲವು ತೋರದೆ ಒಲಿದು ದಯದಲಿ 1
ಚೂತರಸದಿ ಬಿದ್ದ ಶಿಶುವು ಅಸುನೀಗಲಾಕ್ಷಣ ಮಾತರಿಶ್ವನಮಂತ್ರವ
ಖ್ಯಾತ ಜಪಿಸಿ ಅವನ ಉಳುಹಿದೆ ಭೀತಳಾದ ಪ್ರಸೂತಿ ಕಾಯ್ದವ
ಪ್ರಾರ್ಥಿಸೆ ಭೂನಾಥಜಾತೆಗೆ ನೀತಮಹಿಮನೆ ಪ್ರಾಣದಾತನೆ 2
ಪ್ರಹ್ಲಾದ ಗುರುರಾಜಾ ಅವತರಿಸಿ ಬಂದೆ ಬಾಹ್ಲೀಕ ವ್ಯಾಸರಾಜಾ
ಚೆಲ್ವ ನ್ಯಾಯಾಮೃತವ ಮತ್ತೆ ಒಳ್ಳೆ ಚಂದ್ರಿಕಾ ತರ್ಕತಾಂಡವ
ಮಲ್ಲ ರಚಿಸಿದ ರಾಘವೇಂದ್ರನೆ ಕಳ್ಳ ಶ್ರೀಲಕುಮೀಶನೂಲಿಸಿದ 3
***