Showing posts with label ಎಷ್ಟು ಮರುಗಿದರು ನಿನ್ನ ಹಣೆಯ ಬರೆಹ neleyadikeshava. Show all posts
Showing posts with label ಎಷ್ಟು ಮರುಗಿದರು ನಿನ್ನ ಹಣೆಯ ಬರೆಹ neleyadikeshava. Show all posts

Tuesday, 15 October 2019

ಎಷ್ಟು ಮರುಗಿದರು ನಿನ್ನ ಹಣೆಯ ಬರೆಹ ankita neleyadikeshava

by ಕನಕದಾಸ
ಎಷ್ಟು ಮರುಗಿದರು ನಿನ್ನ ಹಣೆಯ ಬರೆಹ ಅಷ್ಟಲ್ಲದಿಲ್ಲ ಸ್ತುತಿ ವಚನದ ಫಲ ಕಂದಪ

ಅಂಬರದೊಳಾಡುವ ಪಕ್ಷಿ ತನ್ನ ವಶವಹುದೇಉಂಬುವರ ಕರುಬಿದಡೆ ಉದರ ತುಂಬುವುದೇಕಂಬಳಿಯ ಕೊಡಲು ಕನಕಾಂಬರ ತನಗಹುದೆಹಂಬಲಿಸಿ ಹಲವ ಹಲುಬಿದಡೆಸಿರಿಬಹುದೆ1

ಇಲ್ಲದುದ ಬಯಸಿ ಬೇಡಿದೊಡೆ ಭಂಗಬಹುದೊಬಲ್ಲೆನೆಂದೊಡೆ ಮಣಿಸದೆ ಬಿಡಳು ವಿಧಿಯುಬಲ್ಲಿದನು ಬಡವನಿವನೆಂದು ನೋಡರುಸಿರಿವಲ್ಲಭನ ಮಗಳ ಮೀರುವರಾರು ಕಡೆಗೆ2

ಸಿರಿಗೆ ಹಿಗ್ಗದೆ ಬಡತನಕೆ ಬೆಂಡಾಗದಿರುಸೇರಿದ ನೆಲೆಯಲಾ ಸುಖ ಸಾವ ಕಾಲದಲಿಶರಣ ಜನಾಶ್ರಿತ ನೆಲೆಯಾದಿಕೇಶವನಚರಣಕಮಲವ ಭಜಿಸಿ ಸುಖಿಯಾಗು ಮನವೆ3
********