ರಾಗ ಶಂಕರಾಭರಣ ಅಟ ತಾಳ
ಎಷ್ಟೆಷ್ಟು ಜನ್ಮವ ಕಳೆದೆನೊ ಇ-
ನ್ನೆಷ್ಟೆಷ್ಟು ಜನ್ಮವ ಕಳೆವೆನೊ
ಕಷ್ಟವ ಪಡಲಾರೆ ಕೃಷ್ಣ ಕೃಪೆಯಿಟ್ಟು
ಇಷ್ಟವ ಪಾಲಿಸೊ ಇಭರಾಜವರದನೆ ||
ಬಾಲತನದಿ ಬಹು ಬೆಂದೆನೊ, ನಾನಾ
ಲೀಲೆಯಿಂದಲಿ ಕಾಲ ಕಳೆದೆನೊ
ಲೋಲ ಲೋಚನ ಎನ್ನ ಮೊರೆ ಕೇಳುತ ಬೇಗ
ಜಾಲವ ಮಾಡದೆ ಪಾಲಿಸೊ ನರಹರಿ ||
ಮುದುಕನಾಗಿ ಚಿಂತೆ ಪಡುವೆನು, ನಾ
ಕದಡು ದುಃಖ ಪಡಲಾರೆನೊ
ಉದಧಿಶಯನ ಶ್ರೀ ಪುರಂದರವಿಠಲ
ಮುದದಿಂದ ರಕ್ಷಿಸೊ ಖಗರಾಜಗಮನ ||
***
pallavi
rakSisu lOka nAyakane nI rakSisu
caraNam 1
eSTeSTu janmava kaLedeno inneSteSTu janmava kaLeveno
kaSTava paDalAre krSNa krpeyiTTu iSTava pAliso ibharAja varadane
caraNam 2
bAlatanadi bahu bendeno nAnA lIleyindali kAla kaLedeno
lOla lOcana enna more kELuta bEga jAlava mADade pAliso narahari
caraNam 3
mudukanAgi cinte paDuvenu nA kadaDu dukkha paDalAreno
udadhi shayana shrI purandara viTTala mudadinda rakSiso khagarAja gamana
***
ರಾಗ ನೀಲಾಂಬರಿ ಅಷ್ಟ ತಾಳ
ರಕ್ಷಿಸು ಲೋಕನಾಯಕನೇ ಎನ್ನನು
ರಾಗ ನೀಲಾಂಬರಿ ಅಷ್ಟ ತಾಳ
ರಕ್ಷಿಸು ಲೋಕನಾಯಕನೇ ಎನ್ನನು
ರಕ್ಷಿಸು ಲೋಕನಾಯಕನೇ ||ಪ||
ಎಷ್ಟೆಷ್ಟು ಜನ್ಮವ ಕಳೆದೆನೊ, ಇ-
ನ್ನೆಷ್ಟೆಷ್ಟು ಜನ್ಮವ ಪಡೆವೆನೊ
ಕಷ್ಟಪಡಲಾರೆ ಕೃಷ್ಣ ಕೃಪೆಯಿಟ್ಟು
ಇಷ್ಟವ ಪಾಲಿಸೊ ಇಭರಾಜವರದನೆ ||೧||
ಬಾಲತನದಲಿ ಬಹು ಬೆಂದೆನೈ, ನಾ
ಲೀಲೆಯಿಂದಲಿ ಕಾಲ ಕಳೆದೆನು
ಲೋಲಲೋಚನ ಎನ್ನ್ ಮೊರೆ ಕೇಳುತಾ ಬೇಗ
ಜಾಲವ ಮಾಡದೆ ಪಾಲಿಸೈ ನರಹರಿ ||೨||
ಮುದುಕನಾಗಿ ಚಿಂತೆ ಪಡುವೆನು, ನಾ
ಕದಡು ದುಃಖವ ಪಡಲಾರೆನು
ಸದರವಲ್ಲವು ಶ್ರೀ ಪುರಂದರವಿಠ್ಠಲ
ಮುದದಿಂದ ರಕ್ಷಿಸು ಖಗರಾಜಗಮನ||೩||
***