Showing posts with label ಹನುಮಂತ ದೇವನ ನೋಡಿ ಘನ ವಿಜ್ಞಾನ ಧನವನ್ನು ಬೇಡಿ lakshmikanta. Show all posts
Showing posts with label ಹನುಮಂತ ದೇವನ ನೋಡಿ ಘನ ವಿಜ್ಞಾನ ಧನವನ್ನು ಬೇಡಿ lakshmikanta. Show all posts

Sunday, 1 August 2021

ಹನುಮಂತ ದೇವನ ನೋಡಿ ಘನ ವಿಜ್ಞಾನ ಧನವನ್ನು ಬೇಡಿ ankita lakshmikanta

 ..

kruti by ಲಕ್ಷ್ಮೀನಾರಯಣರಾಯರು Lakshminarayanaru 


ಹನುಮಂತ ದೇವನ ನೋಡಿ

ಘನ ವಿಜ್ಞಾನ ಧನವನ್ನು ಬೇಡಿ ಪ


ಅನುಮಾನ ಸಲ್ಲ ಸುರಧೇನುವೆನಿಸುವನು

ತನ್ನ ನೆನೆವರಿಗೆ ಅ.ಪ.

ಅಂಜನದೇವಿಯೊಳ್ ಪುಟ್ಟಿ | ಪ್ರ-

ಭಂಜನ ಸುತ ಜಗಜಟ್ಟಿ | ಶ್ರೀ

ಕಂಜನಾಭನನು ಕಂಡು

ಭಜಿಸುತಲಿ ತಾನು ರಂಜಿಪನು 1


ಪಾಥೋದಿಯನು ನೆರೆದಾಟಿ | ರಘು -

ನಾಥನ ಮಡದಿಗೆ ಭೇಟಿ | ಇತ್ತು

ಖ್ಯಾತ ಲಂಕೆಯನು ವೀತಿ-

ಹೋತ್ರನಿಗೆ ಕೊಟ್ಟ ಬಲುದಿಟ್ಟ 2


ಸಂಜೀವನಾದ್ರಿಯ ತಂದು | ಕಪಿ

ಪುಂಜವನೆಬ್ಬಿಸಿ ನಿಂದು | ತುಸ

ಅಂಜಕಿಲ್ಲದಲೆ ಅಸುರರನು

ಭಂಜಿಸಿ ನಿಂತ ಜಯವಂತ 3


ಶ್ರೀರಾಮಚಂದ್ರನು ಒಲಿದು | ಮಹ

ಪಾರಮೇಷ್ಠ್ಯವನೀಯೆ ನಲಿದು | ಮುಕ್ತಾ

ಹಾರ ಪಡೆದ ಗಂಭೀರ

ಶೂರ ರಣಧೀರ ಉದಾರ 4


ಎಂತೆಂತು ಸೇವಿಪ ಜಂತು | ಗಳಿ

ಗಂತಂತೆ ಫಲವೀವನಿಂತು | ಶ್ರೀ -

ಕಾಂತ ನಾಮವನು

ಆಂತು ಭಜಿಪರಲಿ ಪ್ರೇಮ ಬಹುನೇಮ 5

***