ಪಾದ (ಪ)
ಕಲಾತ್ಮನೆಂದು ಶ್ರುತಿ ಪ್ರಕಟಿಸಿ ಪೇಳುತಿದೆ ವಿಕಟಿತಗೊಂಬುದೇನು ಕಾಕ ಬುದ್ಧಿಂದ 1
ಚೆನ್ನಾಗಿ ಸಾರುತಿದೆ ನಾನ್ಯ:ಪಂಥವೆಂಬ ಮಂತ್ರ ಭಿನ್ನವಿಲ್ಲದೆ ನೋಡು ನಿನ್ನೊಳಗೀಗ 2
ಸರ್ಕನೆ ಮಾಡಿಕೊಂಬುದು ಆರ್ತಿ ಉಳ್ಳವರ ಸಂಗತಿ ಬ್ಯಾಗ ತರ್ಕಿಸಬ್ಯಾಡಿತರ ಕೂಡ ಮರ್ಕಟ ಬುದ್ಧಿಂದ 3
ಇಡಿದು ತುಂಬಿಹ್ಯ ವಸ್ತು ಪಡಕೋ ಗುರುಕೃಪೆಯಿಂದ ಎಡಬಲ ನೋಡದೆ ಈಗ ಕೂಡು ನೀ ಬ್ಯಾಗೆ 4
ಪಾದ ಭೇದಿಸೊ ನೀ ಬ್ರಹ್ಮಬೋಧ ಸಾಧುಸದ್ಗೈಸುವದಾ ಸದ್ವಸ್ತುದ 5
ಎಲ್ಲಾರೊಳಿಹ ನಮ್ಮ ಫುಲ್ಲಲೋಚನ ಶ್ರೀಕೃಷ್ಣ ಸುಲಭವಾಗಿಹ ಬಲ್ಲವರಿಗೆ 6
ಬಾಹ್ಯಾಂತ್ರ ಪರಿಪೂರ್ಣ ಮಹಿಪತಿ ಗುರುನಿಧಾನ ಇಹಪರಾನಂದ ಘನ ಸಾಯೋಜ್ಯ ಘನ 7
***