Showing posts with label ದಡ ಸೇರಿಸೋ ಭವದ ಕಡಲಿನ prasannavenkata DADA SERISO BHAVADA KADALINA. Show all posts
Showing posts with label ದಡ ಸೇರಿಸೋ ಭವದ ಕಡಲಿನ prasannavenkata DADA SERISO BHAVADA KADALINA. Show all posts

Sunday, 29 December 2019

ದಡ ಸೇರಿಸೋ ಭವದ ಕಡಲಿನ ankita prasannavenkata DADA SERISO BHAVADA KADALINA





ರಾಗ ಶಿವರಂಜಿನಿ ತಾಳ ಆದಿ 

ದಡ ಸೇರಿಸೋ...ಭವದ ಕಡಲಿನ 
ಕಡೆಮೊದಲಿಲ್ಲದ ಕ್ಲೇಶದ ವಾರಿಧಿಯ||2||

ಶ್ರೀನಿವಾಸ...ಆಆಆ...ದಡ ಸೇರಿಸೋ....ದಡ ಸೇರಿಸೋ...

ಸಾಧು ಸಮಾಗಮ ಸಚ್ಚಾಶ್ರದ 
ಶ್ರವಣಾಧಿಗಳಳಿಲ್ಲದೆ ಕೆಡುವೆ
ಮೇಧಿನಿಯೊಳು ಮೂಡಾತ್ಮನು 
ನಾ ಶ್ರೀ ಪಾದವ ಪೊಂದದೆ ಮಡಿವೆ||ಸಾಧು||

ಸಾಸಿರ ನಾಮದಿ ತುಳಸಿ 
ಕುಸುಮಗಳ ಶ್ರೀಶನಿಗರ್ಪಿಸಲಿಲ್ಲ||2||

ಹೇಸದೆ.... ಮಾಡಬಾರದ ,
ಮಾಡುತ ವಾಸುದೇವ ಕೆಟ್ಟೆನಲ್ಲ |ದಡ ಸೇರಿಸೋ|

ದುರ್ವಿಷಯಕೆ ಮನ ಬೇಸರದೆ, 
ಘನಗರ್ವದಿ ವರ್ತಿಪೆನಲ್ಲ
ಪರ್ವತನೆಗಹುವ ನುಡಿಗಳನಾಡುವೆ, 
ನಿರ್ವಹಕಡ್ಡಿಯೊಳಿಲ್ಲ||ದುರ್ವಿಷಯಕೆ||
ನಿನ್ನ ಸುಗುಣಗಳ ನಂಬುಕೆ 
ಎನಗಿಲ್ಲಾ...ಆ..., ನಿನ್ನ ಪಾದವೇ...ಗತಿಯೋ..||2||

ಇನ್ನಾದರು ಕಡೆಗನ್ನಲಿ ನೋಡದೆ, 
ಮನ್ನಿಸಿ ಕಾಯೊ ಪ್ರಸನ್ನ ವೆಂಕಟ...ಕ್ರಷ್ಣಾ..|ದಡ ಸೇರಿಸೋ|

ಶೇಷಾದ್ರಿವಾಸಾ....ಆ..., ಅಂಜನಾದ್ರಿವಾಸಾ...
ಆ...ಹೇ ಶ್ರೀನಿವಾಸ ದಡ ಸೇರಿಸೋ
*********