ಕಾಖಂಡಕಿ ಶ್ರೀ ಮಹಿಪತಿರಾಯರು
ಮಾಡಿ ಸಾಧುಸಂಗ ನೋಡಿ ಅಂತರಂಗ ಪ
ಕೇಳಿ ಎನ್ನಮಾತ ಹೇಳುವೆ ನಾ ಹಿತ ಅಳಿಯದಾರ್ಜಿತ ತ್ವರಿತ 1
ಪಥ ಬ್ಯಾಗ ಗೂಢ ರಾಜಯೋಗ ಮಡಬ್ಯಾಡಿ ಸೋಂಗ ನೋಡಿ ಬ್ರಹ್ಮಭೋಗ2
ಠಕ್ಕಠವಳಿ ಅಲ್ಲ ಸುಖಸಾಧು ಬಲ್ಲ ಮಿಕ್ಕವರಿಗೆಲ್ಲ ಸಿಕ್ಕುದು ತಾನಲ್ಲ 3
ಒಮ್ಮನ ಮಾಡಿ ನಿಮ್ಮೊಳಗ ನೋಡಿ ಬ್ರಹ್ಮರಸ ಕೂಡಿ ಸುಮ್ಮನೆ ಸೂರ್ಯಾಡಿ 4
ಇಹ್ಯಪರ ಪೂರ್ಣದಯಾಳು ನಿಧಾನ ಮಹಿಪತಿ ಪ್ರಾಣ ಗುರು ಶ್ರೀಚರಣ 5
****