Showing posts with label ಮಾನಾಭಿಮಾನವಿಲ್ಲವೇ ಮಹಲಕ್ಷ್ಮೀ ನಿನಗೆ tulasiramadasa. Show all posts
Showing posts with label ಮಾನಾಭಿಮಾನವಿಲ್ಲವೇ ಮಹಲಕ್ಷ್ಮೀ ನಿನಗೆ tulasiramadasa. Show all posts

Sunday, 5 September 2021

ಮಾನಾಭಿಮಾನವಿಲ್ಲವೇ ಮಹಲಕ್ಷ್ಮೀ ನಿನಗೆ ankita tulasiramadasa

 ತುಳಸೀರಾಮದಾಸರು

ಮಾನಾಭಿಮಾನವಿಲ್ಲವೇ | ಮಹಲಕ್ಷ್ಮೀ ನಿನಗೆ ಪ

ಹೀನ ಜನಂಗಳ ಬೇಡುತ ನಿರುತವುಹೀನ ವೃತ್ತಿಯಿಂದೋಡುತ ತಿರುಗುವೆ 1

ದೀನಾವನ ಬಿರುದೇನಾಯಿತೋ ಶ್ರೀದಾನಿ ನಿನ ನಂಬಿದ ದಾಸನ ವಿಷಯದಿ 2

ಜಾನಕಿ ಶ್ರೀ ರಘುನಾಯಕಿ ತವಪದಧ್ಯಾನವು ನನಗೆ ನಿಧಾನವು ಲಕುಮೀ 3

ಹೇಮಕುಧರ ಧಾಮೇಶ್ವರಿ ತುಲಸಿರಾಮದಾಸನ ಸಂರಕ್ಷಣೆ ಮಾಡುವ 4

***