ಕಾಖಂಡಕಿ ಶ್ರೀ ಕೃಷ್ಣದಾಸರು
ಬಿಡೆ ಬಿಡೆನೋ ನಿನ್ನಾ|ಅಡಿಗಳ ಯುಗಳನ್ನಾ ಪ
ಬಿಡೆ ಬಿಡೆನೋ ನಿನ್ನಾ|ಅಡಿಗಳ ಯುಗಳನ್ನಾ ಬಿಡದಿಹ ಪಾವನ್ನಾ| ಪೊಡವಿಯೊಳಗೆ|ಮೃಡ ಅಜರಿಗೆ ವಡಿಯ ನೀನೀಗ| ಒಡಲ ಹೊಕ್ಕೆನು ಕರುಣಾ ನಿನಗ 1
ಹಲವು ಜನ್ಮಂಗಳನು|ಬಲುತೆರ ಸೂಸಿದೆನು| ನೆಲೆಗಾಆಣದೆ ನಾನು|| ಸುಲಭದಿ ದೊರೆಕಿತು ದೀನೊದ್ದರನೆ 2
ಮುನ್ನ ಮಾಡಿದ ಪರಿ|ಬನ್ನ ಬಡಿಸದೆ ಸಾರಿ| ಚನ್ನಾಗೊಲಿಹರಿ| ಯನ್ನ ಹೃದಯದಲಿ ಇನ್ನು ನಿಶಿದಿನಲಿ|ನೆನೆವ ಭಕುತಿಲಿ| ಸನ್ನುತ ಮಹಿಪತಿ ನಂದನ ಪ್ರಭುವೇ3
***