..
kruti by ಲಕ್ಷ್ಮೀನಾರಯಣರಾಯರು Lakshminarayanaru
ಈ ಮಾಧವ ದೇವಾದಿ ದೇವಾ ಪ
ಪ್ರೇಮದಿಂದ ಕಾವ ಶ್ರೀ ಮಹಾನುಭಾವ ಅ.ಪ.
ಯಾರು ಇಲ್ಲದೆ ಘೋರಾಂಧಕಾರದೆ
ಸೇರಿ ಸಾಗರ ಧೀರನಾಗಿದ್ದವ 1
ಸೃಷ್ಟಿ ಸ್ಥಿತ್ಯಾದಿ ಅಷ್ಟಕರ್ತನಾದಿ
ಇಷ್ಟದಾತನೀತ ಶಿಷ್ಟ ಕೃಪಾನ್ವಿತ 2
ಅಚ್ಯುತಾನಂದ ಸ್ವಚ್ಛಮೂರ್ತಿನಾಥ
ನೆಚ್ಚಿದವರ ಬಿಡ ಲಕ್ಷ್ಮೀಕಾಂತ ದೃಢ 3
***