Showing posts with label ರಾಘವೇಂದ್ರ ಗುರು ನಂಬಿದೆ ನಿಂನಡಿಯಾ ramapati vittala. Show all posts
Showing posts with label ರಾಘವೇಂದ್ರ ಗುರು ನಂಬಿದೆ ನಿಂನಡಿಯಾ ramapati vittala. Show all posts

Thursday, 25 February 2021

ರಾಘವೇಂದ್ರ ಗುರು ನಂಬಿದೆ ನಿಂನಡಿಯಾ ankita ramapati vittala

 ರಾಗ - : ತಾಳ -


ರಾಘವೇಂದ್ರಗುರು ನಂಬಿದೆ ನಿಂನಡಿಯಾ ಜನುಮಜನುಮದ ವಡಿಯಾ l

ಬ್ಯಾಗ ಯನ್ನ ಕರಪಿಡಿಯೊ ದಯಾನಿಧಿಯೆ ನೀಡುವದೈ ಸುಧಿಯೆ ll ಪ ll


ಶ್ರೀ ರಾಮನ ಪದ ಆರಾಧಿಸುವಾತಾ ಪ್ರಹ್ಲಾದನೀತಾ l

ಧೀರ ರಾಜ ಬಾಹ್ಲೀಕನ್ಯೆನಿಸಿದಾತಾ ನರಹರಿ ಕರದಾತಾ l

ಕ್ರೂರ ಮಾಯಾವಾದಿಯ ಮತ ಮುರಿದಾತಾ ವ್ಯಾಸಾರ್ಯನೀತಾ l

ಶೇರಿದ ಶರಣರ ಕರುಣದಿ ಪೊರೆವಾತಾ ಅನಾಥನಾಥಾ ll ೧ ll


ಮಧ್ವ ಮತಾಬ್ಧಿಲಿ ವುದ್ಭವಿಸಿದ ಮಣಿಯೆ ಪರುಷದ ಖಣಿಯೆ l

ಶುದ್ಧ ಭಕುತಿಲ್ನರಹರಿಯ ಗುಣಿಸಿದ ಧಣಿಯೆ ಮುಕ್ತಿ ಚಿಂತಾಮಣಿಯೆ l

ಅದ್ಭುತ ಮಹಿಮೆಯು ಅಗಣಿತ ಗುಣಮಣಿಯೆ ಸಿರಿ ಇಲ್ನಿನ ಗಣಿಯೆ l

ತ್ವದ್ಭಕ್ತರ ಭವ ತಮಸಿಗೆ ದಿನಮಣಿಯೆ ಹೇ ಯತಿಶಿರೋಮಣಿಯೇ ll ೨ ll


ಅವನಿಯೊಳ್ಮಂತ್ರಾಲಯದಲ್ಲಿರುವವನೆ ಪರಮಪಾವನನೆ l

ತವಕದಿ ಭಕ್ತರು ಕರೆದಲ್ಬರುವವನೆ ತೃಪ್ತಿಯ ನೀಡುವನೆ l

ಪವನನೈಯ್ಯ ರಮಾಪತಿವಿಟ್ಠಲನ ಪದನೆ ತೋರುವ ಗುರುವರನೆ l

ಜವನ ಬಾಧಿ ಕಳಿದವಸರಕೊದಗುವನೆ ಬೇಡುವೆನೈ ಇದನೆ ll ೩ ll

***