Showing posts with label ಅಕಟಕಟ ಬಹಳ ಬಡತನವಡಸಿದುದೆ ನಿನಗೆ ಅಕಳಂಕ ಚರಿತ ಹರಿಯೆ ankita vaikunta vittala. Show all posts
Showing posts with label ಅಕಟಕಟ ಬಹಳ ಬಡತನವಡಸಿದುದೆ ನಿನಗೆ ಅಕಳಂಕ ಚರಿತ ಹರಿಯೆ ankita vaikunta vittala. Show all posts

Friday 6 August 2021

ಅಕಟಕಟ ಬಹಳ ಬಡತನವಡಸಿದುದೆ ನಿನಗೆ ಅಕಳಂಕ ಚರಿತ ಹರಿಯೆ ankita vaikunta vittala

 ..

kruti by ಬೇಲೂರು ವೈಕುಂಠ ದಾಸರು belur vaikunta dasaru


ಅಕಟಕಟ ಬಹಳ ಬಡತನವಡಸಿದುದೆ ನಿನಗೆ

ಅಕಳಂಕ ಚರಿತ ಹರಿಯೆ ಪ


ಪ್ರಕಟತನದಿಂ ಗೋದಾನಕ್ಕೆ ಕೈನೀಡುವರೇ

ಸುಖಮಯ ಶರೀರ ಚನ್ನರಾಯಾ ಅ.ಪ


ಹಿಂದೆ ಯಜ್ಞದಲಿ ಬಲಿಯಿತ್ತ ಭೂದಾನಕ್ಕೆ

ದಂದಿಗೆ ಸಾಲದಾಯಿತೆ

ಅಂದು ಕರ್ಣನು ಕೊಟ್ಟ ದಾನವನು ನೀ ಪಿಡಿದು

ದಂದಿಗೆ ಸಾಲದಾಯಿತೆ

ಇಂದು ನಿನ್ನಯ ದಾಸಾನುದಾಸನು ಕೊಟ್ಟ ಗೋದಾನ

ದೊಂದೊಂದು ಗೋಗಳಿಗೆಛಂದದಲಿ

ಒಂದೊಂದು ಶ್ರೀವೈಷ್ಣವ ರೂಪ ನೀನಾಗಿ

ನಿಂದು ದಾನವ ಕೊಂಡೆಯಾ ಸ್ವಾಮಿ 1


ಉರದೊಳಗೆ ಅನವರತ ವಾಸವಾಗಿರುತಿಪ್ಪ

ಶರಧಿಸುತೆ ಕೈಬಿಟ್ಟಳೇ

ಬೆರೆತು ಪೋದುದೇ ಪಾಲ್ಗಡಲು ಮುನಿಸಿಕೊಂಡು

ಬರಡಾಯಿತೇ ಕಾಮಧೇನೂ

ತಿರುಕ ಹಾರುವನಂತೆ ಪರಿಪರಿಯ ದಾನಕ್ಕೆ

ಭರದಿ ಕೈ ಒಡ್ಡುತಿಹರೆ

ಪುರುಷೋತ್ತಮನೆಂಬ ಅಭಿಮಾನವಿನಿತಿಲ್ಲದೇ

ದೂರಿಗೊಳಗಾಗಬಹುದೆ ಸ್ವಾಮಿ 2


ಇತ್ತ ದಾನದ ಗೋವುಗಳನೆಲ್ಲ ಗುಡಿಯೊಳಗೆ

ಮೊತ್ತದಿಂ ಕೂಡಿಕೊಂಡೂ

ಒತ್ತಿ ಮುದ್ರೆಯನು ನಾಮವನಿಟ್ಟು ಬಾಲಗಳಿ

ಗೆತ್ತಿ ಘಂಟೆಗಳ ಕಟ್ಟೀ

ಅರ್ಥಿಯಿಂ ತೋರಿಸಿ ಯೆನ್ನ ಕುಲಕೋಟಿಗಳಿ

ಗಿತ್ತೆ ಸುರಪದವನು

ಕರ್ತುೃ ವೈಕುಂಠ ವೇಲಾಪುರಾಧೀಶ್ವರನೇ

ಭೃತ್ಯನ್ನ ಕಾಯೊ ಸತತ ಸ್ವಾಮಿ 3

***