ತಿರುಮಲೇಶನೆ ನಿನ್ನ ಚರಣ ಪಂಕಜಯುಗಲ
ನೆರೆನಂಬಿದವ ಧನ್ಯನೋ ಪ
ಗುರು ಮೂಲ ಪುರುಷ ನಾರಪ್ಪಯ್ಯ ಮುನಿಗೊಲಿದು
ಕುರಿಕಿಹಳ್ಳಿಯಲಿ ಬಂದಾ ನಿಂದಾ ಅ.ಪ
ವರಋಷಿಯ ಪೂರ್ವದಲಿ
ತಿರುಪತಿಯ ಮುಟ್ಟಿ ಮಲ-
ಗಿರಲು ಸ್ವಪ್ನವ ಕಾಣುತ
ತುರುರೂಪದಲಿ ನಾನೆ ಬರುವೆ ಕಾ-
ರ್ಪರ ವನಕೆ ದರುಶನವÀÀ ಕೊಡುವೆ
ನಿರುತ ಬರುತ ಬರುತಲಿ ವಿಪ್ರ
ತಿರುಗಿ ನೋಡಲು ಪದದಿ ಕಿರುಗಜ್ಜೆಗಳ ನುಡಿಸುತಾ
ಕುರಿಕಿ ಹಳ್ಳಿಯ ಸುಮಂದಿರನೆನಿಸಿ
ಸಿರಿಸಹಿತ ವರಶಿಲೆಯ ಮೇಲೆ ಪಾ
ಲ್ಗರಿದು ನೆಲೆಸಿರುವಂಥ 1
ತೋಂಡಮಾನಕ್ಷಿತಿಪ ಪುಂಡಲೀಕಾದಿ ಬಹು
ತೋಂಡರಿಗೆ ಒಲಿದು ದೇವಾ
ಕುಂಡಲಿ ಪರ್ವತದಿ ತಂಡತಂಡದಿ ಭಕುತ
ಮಂಡಲಿಗೆ ಫಲವ ಕೊಡುವ
ದುಂಡುಮುತ್ತಿನಹಾರ ಮುಕುಟ ರತ್ನಾಭರಣ
ಮಂಡಿತನಾಗಿ ಮೆರೆವ
ಕಂಡೆನಾನಿಮ್ಮ ಪದ ಪುಂಡಲೀಕವನು ಈ
ಗುಂಡಿನಾ ತಿಮ್ಮಯ್ಯನೆಂದು ಕರೆಸಿಕೊಳುವಿ 2
ಕರಮುಗಿವೆ ಮನ್ಮನದಿ
ಕರುಣದಲಿ ತೋರೋತವ
ಪರಮ ಸುಂದರ ಚರಣವ
ನಿರುತ ಸ್ಮರಿಸುವ ಜನರ
ದುರಿತ ತಿಮಿರಕೆ ದಿವಾ
ಕರನೆನಿಸಿ ಸುಖವಗರಿವಾ
ಸುರನಿಕರ ಸೇವ್ಯ ಕಾರ್ಪರನಿಲಯನೆನಿಸೆ ಬಹು
ಶರಣು ಜನರನು ಪೊರಿಯುವಾ
ವರಕೃಷ್ಣ ಗರ್ಭದಲಿ ಒಪ್ಪುವ ಪಿಪ್ಪಲಸ್ಥಶ್ರೀ
ನರಹರಿಯ ಬಳಿಯಲಿರುವಾಮೆರೆವಾ 3
****