Showing posts with label ಗುರುವೆ ಭಾರತಿನಾಥ ಶರಣು ಲಾಲಿಸೋ pranesha vittala. Show all posts
Showing posts with label ಗುರುವೆ ಭಾರತಿನಾಥ ಶರಣು ಲಾಲಿಸೋ pranesha vittala. Show all posts

Monday, 11 November 2019

ಗುರುವೆ ಭಾರತಿನಾಥ ಶರಣು ಲಾಲಿಸೋ ankita pranesha vittala

by ಪ್ರಾಣೇಶದಾಸರು
ಗುರುವೆ ಭಾರತಿನಾಥ | ಶರಣು ಲಾಲಿಸೋ ಮಾತ |ಹರಿಪದಾರ್ಚನೆ ಕೊಟ್ಟು ಪೊರೆಯೋ ದಯೆಯಿಟ್ಟು ಪ

ರಾಮ ಸೇವಕನಾಗಿವಾನರಕಟಕನೆರಹಿ |ನೀಂ ಮುದದಿ ಲವಣಾಬ್ಧಿ ದಾಟಿ ಪೋಗಿ ||ಭೂಮಿ ತನುಜೆಳಿಗೆ ವಾರ್ತೆಯನೆ ಪೇಳಿ | ರಾಗಟಿಯಸ್ವಾಮಿಗರ್ಪಿಸಿದ ಬಲವಂತ ಹನುಮಂತ 1

ರಾಜಸೂಯವ ಮಾಡುವದಕೆ ಮಾಗಧನ ಕೊಂದೆ |ಮಾಜಿಸಿದೆ ಕುರುಪತಿಯ ಸಂತತಿಯನು ||ಸೋಜಿಗವು ನಿನ್ನ ಲೀಲೆಯು ಆಯುಜಾತ ಬಿ |ಡೌಜ ರಕ್ಷಕ ದ್ರೌಪದೀಶ ಬಲವಂತ 2

ಬುಧಮಧ್ಯಗೇಹನಲಿ ಅವತರಿಸಿ ಕುಮತಗಳ |ಬೆದರಿಸಿತ್ರಿದಶಸಪ್ತ ಗ್ರಂಥ ಮಾಡಿ ||ಸುದಯದಿಂದುತ್ತಮರಿಗಿತ್ತು ಮತವನು ನಿಲಿಸಿ |ಬದರಿಯೋಳ್ ಪ್ರಾಣೇಶ ವಿಠಲನಲ್ಲಿರುವೆ 3
********