Showing posts with label ಬಾಲಕನೆಂದೆತ್ತಿಕೊಂಡೆನೆ ಗೋಪಾಲಕೃಷ್ಣನಬಾಲಕನೆಂದೆತ್ತಿಕೊಂಡೆನೆ neleyadikeshava. Show all posts
Showing posts with label ಬಾಲಕನೆಂದೆತ್ತಿಕೊಂಡೆನೆ ಗೋಪಾಲಕೃಷ್ಣನಬಾಲಕನೆಂದೆತ್ತಿಕೊಂಡೆನೆ neleyadikeshava. Show all posts

Wednesday, 1 September 2021

ಬಾಲಕನೆಂದೆತ್ತಿಕೊಂಡೆನೆ ಗೋಪಾಲಕೃಷ್ಣನಬಾಲಕನೆಂದೆತ್ತಿಕೊಂಡೆನೆ ankita neleyadikeshava

 ..

ಬಾಲಕನೆಂದೆತ್ತಿಕೊಂಡೆನೆ - ಗೋಪಾಲಕೃಷ್ಣನಬಾಲಕನೆಂದೆತ್ತಿಕೊಂಡೆನೆ ಪ


ಬಾಲಕನೆಂದೆತ್ತಿಕೊಂಡರೆ - ವಾರೆ ಮಾಡಿ ಮೋರೆ ನೋಡಿಶ್ರೀಲತಾಂಗಿಯರ ಲೋಲ - ಮಾರನಾಟವಾಡಿ ಪೋದನೆ ಅ


ಹೊತ್ತರೆದ್ದು ಮನೆಗೆ ಬಂದನೆ - ಯಶೋದೆ ಕೇಳೆ ಎತ್ತಿಕೊಂಡು ಮುತ್ತುಕೊಟ್ಟೆನೆಎತ್ತಿಕೊಂಡು ಮುತ್ತು ಕೊಟ್ಟರೆಮುತ್ತಿನ್ಹಾರ ಕೊರಳಿಗ್ಹಾಕಿಚಿತ್ತಜಾತ ಕೇಳಿಯಲ್ಲಿಬತ್ತಲೆ ನಿಂದೆತ್ತು ಎಂದನೆ1


ಗಂಡನಂತೆ ಮನೆಗೆ ಬಂದನೆ - ಯಶೋದೆ ಕೇಳೆಮಿಂಡನಂತೆ ಕಣ್ಣು ಹೊಡೆದನೆಪುಂಡಪೋಕರನ್ನು ಮೀರಿದುಂಡು ಕುಚಗಳನ್ನು ಪಿಡಿದುದಿಂಡುರುಳಿಸಿ ಒಂದುಸರಲಿಬಂಡನುಂಡು ಹಾರಿ ಪೋದನೆ 2


ಏಸು ಮೋಸ ಕಲಿತ ಜಾಣನೆ - ಯಶೋದೆ ಕೇಳೆವಾಸುದೇವ ಮಾಯಕಾರನೆಹಾಸುಮಂಚದ ಹಾಸುಗೆಯಲಿತೋಷದಿಂದ ಬಾಚಿ ಸೆಳೆದುಶೇಷನನ್ನು ಪೂಜಿಸೆಂದಶ್ರೀಶ ಬಾಡದಾದಿ ಕೇಶವ 3

***