Showing posts with label ಮನವೆ ನೀ ಸ್ಥಿರವಾಗಿ ಹರಿಯ ಪಾದಾಂಬುಜವನು ಸೇರಿ ಅಲ್ಲಿಯೆ ನಿಲ್ಲಯ್ಯ ಬಿಡದೆ gadugina veeranarayana. Show all posts
Showing posts with label ಮನವೆ ನೀ ಸ್ಥಿರವಾಗಿ ಹರಿಯ ಪಾದಾಂಬುಜವನು ಸೇರಿ ಅಲ್ಲಿಯೆ ನಿಲ್ಲಯ್ಯ ಬಿಡದೆ gadugina veeranarayana. Show all posts

Wednesday, 1 September 2021

ಮನವೆ ನೀ ಸ್ಥಿರವಾಗಿ ಹರಿಯ ಪಾದಾಂಬುಜವನು ಸೇರಿ ಅಲ್ಲಿಯೆ ನಿಲ್ಲಯ್ಯ ಬಿಡದೆ ankita gadugina veeranarayana

 ..

kruti by ವೀರನಾರಾಯಣ Veeranarayana 


ಮನವೆ ನೀ ಸ್ಥಿರವಾಗಿ ಹರಿಯ ಪಾದಾಂಬುಜವನು ಸೇರಿ ಅಲ್ಲಿಯೆ ನಿಲ್ಲಯ್ಯ ಬಿಡದೆ ಪ


ಅನುದಿನ ಸೇವಿಸಲನುವಾಗುದಯ್ಯಾಘನ ಚಂಚಲ ನೀನು ಎಚ್ಚರ ಎಚ್ಚರ ಅ.ಪ.


ಅಲ್ಲಲ್ಲಿ ಇಲ್ಲೆಂದು ಎಲ್ಲೂ ಹುಡುಕಲು ಬೇಡಎಲ್ಲೆಲ್ಲ್ಯೂ ಇರುವ ಶ್ರೀವಲ್ಲಭನುಬಲ್ಲವರಾಡುವ ಸೊಲ್ಲನು ಲಾಲಿಸುಖುಲ್ಲನೆಂಬುವ ನಿಂದೆಗೀಡಾಗಬೇಡಾ 1


ಸದುಗತಿಯ ಕೊಡುವ ಶ್ರೀ ಪದುಮನಾಭನ ಪಾದಪದುಮದಿ ಮಧುರ ನಾಮಾಮೃತ ಸವಿಯುತ ಮುದದಿಸದನವ ಬಿಡದೆ ಸುತ್ತಾಡುತ್ತಲಿರು ನಿತ್ಯ 2


ಧ್ಯಾನದ ದಾರದಿಂ ಜಪವೆಂಬ ಗಂಟಿರಲಿಶ್ರೀನಿವಾಸನ ಪಾದವೆಂಬ ಗೂಟಕೆ ಕಟ್ಟಿಮೌನದಿಂ ಕಟ್ಟಿಸಿಕೊಂಡಲ್ಲೇ ಸುಳಿದಾಡುಸ್ಥಾನವ ಬಿಟ್ಟನ್ಯನಿಟ್ಟಿಗೆ ಪೋಗದೆ 3


ಸಕಲರ ಪಾಪವ ತೊಳೆದು ಪಾವನಗೈದುಮುಕುತಿಯ ದಾರಿಯ ತೋರುವ ನದಿಗಂಗೆಪ್ರಕಟವಾಗಿರುವಂತೆ ಚರಣದೊಳುರುಳಾಡುಭಕುತಿಯ ಬೇಡು ನೀ ಪ್ರತಿದಿನ ನೋಡು 4


ಗದುಗಿನ ವೀರನಾರಾಯಣಗೂ ನಿನಗೂ ಹೃದಯವೆ ಮಂದಿರವಲ್ಲವೆ ದೀಪದಕದಿರಂತ ಚಾಚುತ ಪೋಗಿಬರುವದೇತಕೆಸದನವ ಬಿಡದಲ್ಲೇ ಹರಿಯನು ಸೇವಿಸು 5

***