Wednesday 1 September 2021

ಮನವೆ ನೀ ಸ್ಥಿರವಾಗಿ ಹರಿಯ ಪಾದಾಂಬುಜವನು ಸೇರಿ ಅಲ್ಲಿಯೆ ನಿಲ್ಲಯ್ಯ ಬಿಡದೆ ankita gadugina veeranarayana

 ..

kruti by ವೀರನಾರಾಯಣ Veeranarayana 


ಮನವೆ ನೀ ಸ್ಥಿರವಾಗಿ ಹರಿಯ ಪಾದಾಂಬುಜವನು ಸೇರಿ ಅಲ್ಲಿಯೆ ನಿಲ್ಲಯ್ಯ ಬಿಡದೆ ಪ


ಅನುದಿನ ಸೇವಿಸಲನುವಾಗುದಯ್ಯಾಘನ ಚಂಚಲ ನೀನು ಎಚ್ಚರ ಎಚ್ಚರ ಅ.ಪ.


ಅಲ್ಲಲ್ಲಿ ಇಲ್ಲೆಂದು ಎಲ್ಲೂ ಹುಡುಕಲು ಬೇಡಎಲ್ಲೆಲ್ಲ್ಯೂ ಇರುವ ಶ್ರೀವಲ್ಲಭನುಬಲ್ಲವರಾಡುವ ಸೊಲ್ಲನು ಲಾಲಿಸುಖುಲ್ಲನೆಂಬುವ ನಿಂದೆಗೀಡಾಗಬೇಡಾ 1


ಸದುಗತಿಯ ಕೊಡುವ ಶ್ರೀ ಪದುಮನಾಭನ ಪಾದಪದುಮದಿ ಮಧುರ ನಾಮಾಮೃತ ಸವಿಯುತ ಮುದದಿಸದನವ ಬಿಡದೆ ಸುತ್ತಾಡುತ್ತಲಿರು ನಿತ್ಯ 2


ಧ್ಯಾನದ ದಾರದಿಂ ಜಪವೆಂಬ ಗಂಟಿರಲಿಶ್ರೀನಿವಾಸನ ಪಾದವೆಂಬ ಗೂಟಕೆ ಕಟ್ಟಿಮೌನದಿಂ ಕಟ್ಟಿಸಿಕೊಂಡಲ್ಲೇ ಸುಳಿದಾಡುಸ್ಥಾನವ ಬಿಟ್ಟನ್ಯನಿಟ್ಟಿಗೆ ಪೋಗದೆ 3


ಸಕಲರ ಪಾಪವ ತೊಳೆದು ಪಾವನಗೈದುಮುಕುತಿಯ ದಾರಿಯ ತೋರುವ ನದಿಗಂಗೆಪ್ರಕಟವಾಗಿರುವಂತೆ ಚರಣದೊಳುರುಳಾಡುಭಕುತಿಯ ಬೇಡು ನೀ ಪ್ರತಿದಿನ ನೋಡು 4


ಗದುಗಿನ ವೀರನಾರಾಯಣಗೂ ನಿನಗೂ ಹೃದಯವೆ ಮಂದಿರವಲ್ಲವೆ ದೀಪದಕದಿರಂತ ಚಾಚುತ ಪೋಗಿಬರುವದೇತಕೆಸದನವ ಬಿಡದಲ್ಲೇ ಹರಿಯನು ಸೇವಿಸು 5

***


No comments:

Post a Comment