kruti by ಗುರುಗೋವಿಂದಠಲ (ಮೈಸೂರು)
ರಾಗ: ಮಧ್ಯಮಾವತಿ ತಾಳ: ಅಟ
ಬಾರಯ್ಯ ಬಾ ಬಾ ಬುಧಜನಗೇಯಾ ಹೇ ಗುರುರಾಯಾ
ಸಾರಿ ಬರುವ ಭಕುತರೊಡೆಯ ಕಾಯಯ್ಯ ಜೀಯಾ ಪ
ವಾರಿಜನಾಭನ ವಾರಿಧಿಮಥನನ
ವೈರದಿ ಭಜಿಸಿದ ಪುರಟ ಕಶ್ಯಪನ
ವರ ಉದರೋದ್ಭವ ಹರಿ ಪ್ರಿಯ ಭಕುತನೆ
ಶರಣರ ಪೊರೆಯಲು ತ್ವರ್ಯದಿ ಬಾರೋ ಅ.ಪ.
ಪ್ರಥಮ ಪ್ರಹ್ಲಾದ ದಿತಿಸುತ ದೊರೆಯೇ ಬಾಹ್ಲೀಕ ದೊರೆಯೇ
ಚತುರ ಚಂದ್ರಿಕೆ ಗುರು ಮಂತ್ರಾಲಯ ಗುರುವೇ ದೊರೆ ಬಲು ಮೊರೆಯೇ
ವ್ಯಥೆಯಾಕೆನ್ನುತ ಹಸ್ತವ ಚಾಚುತ
ಹುತವಹನೊಳು ಬಲು ಜತನಾಗಿರಿಸಿಹ
ರತುನ ಹಾರವ ಪ್ರೀತಿಲಿ ಕೊಡುತ
ಅತಿಶಯ ತೋರಿದ ಯತಿ ರಾಘವೇಂದ್ರ 1
ಸುಧೀಂದ್ರರ ಕರಜ ಮಂತ್ರಾಲಯ ನಿಲಯ ಬಲು ಮಂತ್ರಗಳೊಡೆಯಾ
ಬಧಿರ ಮೂಕರ ಅಂಧರ ಹೊರೆಯಾ ಪರಿಹರಿಸುವ ದೊರೆಯಾ
ಮಧ್ವಾಂತರ್ಗತ ಮಧು ಕೈಟ ಭಾರಿಯ
ಸಿದ್ಧಾಂತದ ಸವಿ ಹೃದ್ಗತ ಮಾಡಿದ
ವಿದ್ವನ್ಮಣಿಗಳ ಸದ್ವøಂದದ ಖಣಿ
ಸದ್ವಿದ್ಯದ ಸವಿ ಮೋದದಿ ಉಣಿಸಲು 2
ಮನ್ರೋವಿನ ಮನ ತಿಳಿಯುತಲಿನ್ನೂ ಮುನಿವರ ತಾನೂ
ಸಾನುರಾಗದಿ ತನುವ ತೋರಿದನೂ ಘನ ಕರುಣಿಯು ತಾನೂ
e್ಞÁನಗಮ್ಯ ಗುರುಗೋವಿಂದವಿಠಲನ
ಧ್ಯಾನಿಸೆ ಪೊಗುತಲಿ ವೃಂದಾವನವ
ಆನತ ಜನ ಮನದಿಷ್ಟವ ಸಲಿಸುತ
ಮೌನಿವರೇಣ್ಯನೆ ತುಂಗೆಯ ತೀರಗ
***