ರಮೆಯರಸ ರಕ್ಷಿಸೋ
ನಮಿತಜನರ ಕಲ್ಪದ್ರುಮ ಸುಮನೋಹರ ಪ
ಅಮಿತ ಸುಗುಣ ಪೂರ್ಣ-ಶಮಲವರ್ಜಿತ ಹೃ-
ತ್ಕಮಲ ದ್ಯುಮಣಿ ನಿಸ್ಸೀಮಮಹಿಮ ಸಂಪೂರ್ಣಕಾಮ ಹರಿ1
ಸೃಷ್ಟಿಗೊಡೆಯ ಪರಮೇಷ್ಟಿಜನಕ ನಿನ್ನಿಷ್ಟರ ಅಘ ಸಂ-
ಕಷ್ಟಹರಿಸಿ ಸಂತುಷ್ಟಿಯನೀವ ನಿರ್ದುಷ್ಟಫಲಪ್ರದ 2
ಉರಗಾದ್ರಿವಾಸವಿಠಲ ದೇವ ಹರೇ ಕರೆ ನಿನ್ನ ಬಳಿ
ಸಿರಿ ವೆಂಕಟೇಶನೆ ದೊರೆ-ಪೊರೆ ನಿನ್ನ್ಹೊರತು ನಾನರಿಯೆ 3
****