Showing posts with label ಭೂತರಾಜ ಕರುಣಿಸೊ ಭೂತರಾಜ others. Show all posts
Showing posts with label ಭೂತರಾಜ ಕರುಣಿಸೊ ಭೂತರಾಜ others. Show all posts

Friday, 27 December 2019

ಭೂತರಾಜ ಕರುಣಿಸೊ ಭೂತರಾಜ others

ಭೂತರಾಜ ಕರುಣಿಸೊ ಭೂತರಾಜ
ಮುಂದೆ ಬೆಳ್ಳಿಯ ಗಿರಿನಾಥನೆಂದೆನಿಸುವ ಭೂತರಾಜ ||ಪ||

ವಾದದಿಂದಲಿ ಸೋತು
ವಾದಿರಾಜರ ಸೇರ್ದೆ
ಭೂತಾದಿಗಳ ಬೇಗದಿಂದಲೋಡಿಸುವಿ ||1||

ವಾದಿರಾಜರ ಬಲಭಾಗದಿ ನಿಂತಿರ್ದೆ
ಬಂದ ಜನರಿಗಿಷ್ಟ
ಕೊಟ್ಟು ಪೋಷಿಸುವಿ ||2||

ರಾಜೇಶ ಹಯಮುಖ-
ನೊಲಸಿ ಕೊಂಡಿಹ ಋಜು
ಗಣನಾಥ ಶ್ರೀವಾದಿರಾಜ ಕಿಂಕರವರ್ಯ ||3||
********