Showing posts with label ಪಾಲಯಾನಂತ ಶಯನಾ ಶ್ರೀ ಲೋಲಂಬುಜ ನಯನಾ gurumahipati. Show all posts
Showing posts with label ಪಾಲಯಾನಂತ ಶಯನಾ ಶ್ರೀ ಲೋಲಂಬುಜ ನಯನಾ gurumahipati. Show all posts

Wednesday, 1 September 2021

ಪಾಲಯಾನಂತ ಶಯನಾ ಶ್ರೀ ಲೋಲಂಬುಜ ನಯನಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಪಾಲಯಾನಂತ ಶಯನಾ| ಶ್ರೀ ಲೋಲಂಬುಜ ನಯನಾ ಪ 


ಸರಸಿಜಾಸನ ಜನಕಾ ವರ ಯದುಕುಲ ತಿಲಕಾ| ಸುರಮುನಿಜನ ಪ್ರೀಯ ಪಾಂಡವ ರಕ್ಷಕ| ಶರಣಾಗತ ವತ್ಸಲಾ ವಿಶ್ವವ್ಯಾಪಕಾ 1 

ಭವ ಪಾಶಾ| ಮುರಹರ ಸರ್ವೇಶಾ| ಕರುಣಾ ಸಾಗರ| ಮುಕುಂದ ಹೃಷಿಕೇಶಾ| ಸರಸಿರುಹ ಸಖ| ಕೋಟಿ ಪ್ರಕಾಶ2 

ನವನೀತ ಚೋರಾ| ಗಿರಿವೈರಿ ಸೋದರಾ| ದುರಿತ ನಿವಾರಣ| ಪೀತಾಂಬರ ಧರಾ| ಗುರುವರ ಮಹಿಪತಿ| ಸುತ ಮನೋಹರಾ 3

****