Showing posts with label ಕೊಡು ಕಂಡೆಯಾ ಕಂಡ್ಯ ಹರಿಯೆ ನಿನ್ನ ನಾಮ purandara vittala. Show all posts
Showing posts with label ಕೊಡು ಕಂಡೆಯಾ ಕಂಡ್ಯ ಹರಿಯೆ ನಿನ್ನ ನಾಮ purandara vittala. Show all posts

Wednesday, 4 December 2019

ಕೊಡು ಕಂಡೆಯಾ ಕಂಡ್ಯ ಹರಿಯೆ ನಿನ್ನ ನಾಮ purandara vittala

ಪುರಂದರದಾಸರು
ರಾಗ ಭೈರವಿ ಛಾಪುತಾಳ

ಕೊಡು ಕಂಡ್ಯ ಹರಿಯೆ , ಬಿಡೆ ನಿನ್ನ ನಾಮವ ||ಪ||
ಬಡವ ನಾನೆಂದು ನಿನ್ನ ಕಾಡುವನಲ್ಲವೊ ||ಅ||

ಒಡಲು ತುಂಬದು ಎಂದು ಬಳಲಿಸಬರಲಿಲ್ಲ
ಸಡಗರದ ಭಾಗ್ಯ ಬೇಡಲಿಲ್ಲ
ಮಡದಿ ಮಕ್ಕಳಿಗಾಗಿ ಕಡುಮೋಹ ಎನಗಿಲ್ಲ
ಬಿಡದೆ ನಿನ್ನಯ ನಾಮಸ್ಮರಣೆಯೊಂದೇ ಸಾಕೊ ||

ಸ್ನಾನ ಮೌನ ಜಪ ತಪಗಳು ಎನಗಿಲ್ಲ
ಮೌನನಾದೆನೋ ನಿನ್ನ ಧ್ಯಾನದಿಂದ
ದೀನರಕ್ಷಕ ನೀನೆ ದಯದಿಂದಲೆನ್ನನು
ಧ್ಯಾನಶುದ್ಧಿಯನಿತ್ತು ಸಲಹಯ್ಯ ಹರಿಯೆ ||

ಬಲೆಗೆ ಸಿಲುಕಿದ ಮೃಗದಂತೆ ಬಾಯಿ ಬಿಡುತ
ಅಲಸಿ ಕೋಟಲೆ ಸಂಸಾರದಿಂದ
ತಲೆಹುಳುತ ನಾಯಂತೆ ಬಯಲಾಸೆಗೆ ಸಿಲುಕಿದೆ
ಸಲಹೊ ದೇವರ ದೇವ ಪುರಂದರವಿಠಲ ||
***

pallavi

koDu kaNDya hariyE biDE ninne nAmava

anupallavi

baDava nAnendu ninna kADuvanallavO

caraNam 1

oDalu tumbadu endu baLalisa baralilla saDagarada bhAgya bEDalilla
maDadi makkaLigAgi kaDu mOha enagilla biDade ninnaya nAma smaraNeyonde sAkO

caraNam 2

snAna mauna japa tapagaLu enagilla maunanAdeno ninna dhyAnadinda
dIna rakSaka nIne dayadindalennanu dhyAna shuddhiyanittu salahayya hariyE

caraNam 3

balage silukida mrgadante bAyi biDuta alasi koDale samsAradinda
tale huLuta nAyante bayalAsege silukide salaho dEvara dEva purandara viTTala
***

ಕೊಡು ಕಂಡೆಯಾ ಹರಿಯೆ ನಿನ್ನ ನಾಮ-|
ಕೊಡು ಕಂಡೆಯಾ ಹರಿಯೆ ಪ

ಬಡವ ನಾನೆಂದು ಕಾಡಲಿಲ್ಲ ಹರಿಯೆ ಅ.ಪ

ಒಡಲುತುಂಬದು ಎಂದು ಬಳಲಿಸೆ ಬರಲಿಲ್ಲ |
ಸಡಗರದಿಂ ಭಾಗ್ಯ ಬೇಡಲಿಲ್ಲ ||
ಮಡದಿ-ಮಕ್ಕಳಿಗಾಗಿ ಕಡು ಮೋಹವೆನಗಿಲ್ಲ |
ಬಿಡದೆ ನಾಮಸ್ಮರಣೆ ಕೊಡು ಒಂದೇ ಸಾಕೊ 1

ಸ್ನಾನ-ಮೌನ ಜಪ-ತಪಗಳು ಎನಗಿಲ್ಲ |
ನಾನಾಯೋನಿಗಳಲ್ಲಿ ಬಳಲಿ ಬಂದೆ ||
ದೀನರಕ್ಷಕ ನೀನೆ ದಯದಿಂದಲೆನಗಿನ್ನು |
ಧ್ಯಾನಸುಧೆಯನಿತ್ತು ಸಲಹಯ್ಯ ಹರಿಯೆ 2

ಬಲೆಗೆ ಸಿಲುಕಿದ ಮೃಗದಂತೆ ಬಾಯ್ಬಿಡುತಲಿ |
ಅಲಸಿ ಕೋಟಲೆಯ ಸಂಸಾರದಿಂದ |
ತಲೆಹುಳಿತ ನಾಯಂತೆ ಬಯಲಾಸೆಗೆ ಸಿಲುಕಿದೆ |
ಸಲಹೊ ದೇವರ ದೇವಪುರಂದರವಿಠಲ3
*******